ನನ್ನ ತಂಗಿಗೆ ಸಿನಿಮಾ ನೋಡಲು ಬಿಡದೇ ಚಪ್ಪಲಿ ಎಸೆದಿದ್ದ ಆತ : ಸಿಡಿದೆದ್ದ ಕಂಗನಾ ಸಹೋದರಿ

ಕಂಗನಾ ಮತ್ತುಅಲಿಯಾ ಭಟ್ ಅವರು ಸಿನಿಮಾಗಿಂತ ಹೆಚ್ಚಾಗಿ ಸುದ್ದಿಯಾಗೋದೇ ಕಾಂಟ್ರೋವರ್ಸಿಯಿಂದ.ಇದೀಗ ಕಂಗನಾ ವಿವಾದಕ್ಕೆ ಅಲಿಯಾ ತಾಯಿ ಎಂಟ್ರಿಯಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಅಲಿಯಾ ಅಮ್ಮ ಮಾಡಿದ ಟ್ವೀಟ್ ಗೆ ಇದೀಗ ಕಂಗನಾ ಸಹೋದರಿ ಕೂಡ ಸಿಡಿದೆದ್ದಿದ್ದಾರೆ. ಎಂದಿಗೂ ಸಮಾಜಿಕ ಜಾಲತಾಣದಿಂದ ದೂರವಿರುವ ಕಂಗನಾ ಸಹೋದರಿ ರಂಗೋಲಿ ಇದೀಗ ಚಾಮುಂಡಿ ಅವತಾರ ತಾಳೋಕೆ ಅಲಿಯಾ ತಾಯಿ ಕಾರಣಕರ್ತರಾಗಿದ್ದಾರೆ.
ಕೆಲ ದಿನಗಳ ಹಿಂದೆ ಟ್ಟೀಟರ್ ಖಾತೆಯಲ್ಲಿ 'ಕಂಗನಾಗೆ ಚಿತ್ರರಂಗದಲ್ಲಿ ಬ್ರೇಕ್ ಸಿಕ್ಕಿದ್ದು ನನ್ನ ಪತಿ ಮಹೇಶ್ ಭಟ್‌ರಿಂದ. ಆದರೆ ಅದನ್ನು ಮರೆತು ಕಂಗನಾ, ಅಲಿಯಾ ಹಾಗೂ ಮಹೇಶ್ ಮೇಲೆ ಆರೋಪ ಮಾಡಿ ಮಾತನಾಡುತ್ತಿದ್ದಾರೆ ' ಎಂದು ಟ್ಟೀಟ್ ಮಾಡಿದರು. ಇದನ್ನು ಕಂಡು ಸುಮ್ಮನಿರಲಾರದೆ ಕಂಗನಾ ಸಹೋದರಿ ಖಡಕ್ ಉತ್ತರ ನೀಡಿದರು. ಅಲಿಯಾ ತಾಯಿ ಹೇಳುತ್ತಿದ್ದಂತೇ ಕಂಗನಾ ಸಹೋದರಿ ರಂಗೋಲಿ ಬೆಂಕಿಯ ಹಾಗೇ ಕಿಡಿಕಾರಿದ್ದಾರೆ.ಕಂಗನಾಳ ವಾಹ್ ಲಮ್ಹೇ ಚಿತ್ರದ ಪ್ರಿವ್ಯೂವ್ ವೇಳೆ ಅದೇ ಚಿತ್ರದ ನಿರ್ಮಾಪಕ ಮಹೇಶ್ ಭಟ್ ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರು. ಆಕೆಯನ್ನು ಸಿನಿಮಾ ನೋಡಲು ಬಿಟ್ಟಿರಲಿಲ್ಲ ಆಗ ಆಕೆಗೆ ಕೇವಲ 18 ವರ್ಷವಷ್ಟೇ. ಅಷ್ಟೇ ಅಲ್ಲ ಕಂಗನಾಗೆ ಬ್ರೇಕ್ ಕೊಟ್ಟವರು ಮಹೇಶ್ ಭಟ್ ಅಲ್ಲ ನಿರ್ದೇಶಕ ಅನುರಾಗ್ ಬಸು ' ಎಂದು ಕಂಗನಾ ಸಹೋದರಿ ರಂಗೋಲಿ ತಿರುಗೇಟು ಕೊಟ್ಟಿದ್ದಾರೆ.
Comments