ಶೂಟಿಂಗ್ ಮುಗಿಸಿ ವಾಪಸ್ ಆಗುವಾಗ ನಟಿಯರಿಬ್ಬರ ದುರ್ಮರಣ…!!!

ಇಂದು ಲೋಕ ಸಭಾ ಚುನಾವಣೆ ಎಲ್ಲೆಡೆ ಭರದಿಂದ ನಡೆಯುತ್ತಿದೆ. ಆದರೆ ನಟಿಯರಿಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ಘಟನೆ ತಡವಾಗಿ ವರದಿಯಾಗಿದೆ. ನಟಿಯರು ಪ್ರಯಾಣ ಮಾಡುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯಲ್ಲಿ ನಡೆದಿದದೆ.
ಕಿರುತೆರೆ ನಟಿ ಭಾರ್ಗವಿ(20) ಮತ್ತು ಅನುಷಾ ರೆಡ್ಡಿ(21) ಮೃತ ದುರ್ದೈವಿಗಳು. ಚೆವೆಲ್ಲಾದಲ್ಲಿನ ಅಪ್ಪರೆಡ್ಡಿ ಬಸ್ ನಿಲ್ದಾಣದ ಬಳಿ ಈ ಅಪಘಾತ ನಡೆದಿದ್ದು, ಇಬ್ಬರು ನಟಿಯರು ಧಾರಾವಾಹಿಯ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಂದಹಾಗೇ ಧಾರವಾಹಿಯ ಶೂಟಿಂಗ್ ನಿಮಿತ್ತ ಧಾರವಾಹಿ ತಂಡ ಅನಂತಗಿರಿ ಅರಣ್ಯಕ್ಕೆ ಹೋಗಿದ್ದಾರೆ, ಅಲ್ಲಿ ಕೆಲ ದೃಶ್ಯಗಳ ಶೂಟಿಂಗ್ ಕೂಡ ಮುಗಿಸಿ ಮಂಗಳವಾರ ರಾತ್ರಿ ಹೈದರಾಬಾದಿಗೆ ಹಿಂದಿರುಗುತ್ತಿದ್ದರು. ನಟಿಯರು ಹೋಗುತ್ತಿದ್ದ ಕಾರು ಚಾಲಕ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನುಷಾ ಮತ್ತು ಭಾರ್ಗವಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತ ಭಾರ್ಗವಿ ತೆಲಂಗಾಣ ನಿವಾಸಿಯಾಗಿದ್ದು, ‘ಮುತ್ಯಾಲ ಮುಗ್ಗು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.
Comments