ಪ್ರಚಾರಕ್ಕೆ ಬರದ ರಜನೀಕಾಂತ್ ಕೊನೆಗೂ ಬರ್ತಿರೋದ್ಯಾಕೆ…?!!

ರಜನೀಕಾಂತ್ ಕನ್ನಡದವರೇ ಆಗಿದ್ರೂ ಮಿಂಚಿದ್ದು ಮಾತ್ರ ತಮಿಳಿನಲ್ಲಿ. ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡ ರಜನೀಕಾಂತ್ ಒಂದಷ್ಟು ದಿನ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ರು. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಚುನಾವಣೆಗೆ ನಿಂತಿದ್ದಾರೆ. ಇವರ ಪರ ಅಂಬಿ ದೋಸ್ತು ರಜನೀ ಕ್ಯಾಂಪೇನ್ ಬರ್ತಾರೆ ಎಂಬ ಸುದ್ದಿ ಬಹಳಷ್ಟು ವ್ಯಾಪಕವಾಗಿ ಸದ್ದು ಮಾಡಿತ್ತು. ಆದರೆ ಅದ್ಯಾಕೋ ಈ ಬಗ್ಗೆ ಸುಮಲತಾ ಅವರೇ ರಜನೀಕಾಂತ್ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ರಜನೀ ಕಾಂತ್ ಬರ್ತಿದ್ದಾರಂತೆ, ಆದರೆ ಸುಮಲತಾ ಪರ ಪ್ರಚಾರಕ್ಕೆ ಬರದ ಅವರು....ಬರ್ತಿರೋದ್ಯಾಕೆ ಗೊತ್ತಾ..?
ಅಂದಹಾಗೇ ಕನ್ನಡದ ಬಹುದೊಡ್ಡ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ನಾಲ್ಕನೇ ಆವೃತ್ತಿ ಶುರುವಾಗುತ್ತಿದೆ. ಈಗಾಗಲೇ ಅನೇಕ ಸಾಧಕರನ್ನು ಪರಿಚಯ ಮಾಡಿಸಿದ ಶೋಗೆ ರಜನೀಕಾಂತ್ ಕೂಡ ಬರ್ತಿದ್ದಾರೆಂಬ ಸುದ್ದಿ ಇದೆ. ಆದರೆ ಈ ಬಾರಿ ಕಾರ್ಯಕ್ರಮಕ್ಕೆ ರಜನೀಕಾಂತ್ ಅವರನ್ನು ಕರೆಸೋ ಪ್ರಯತ್ನ ನಡೆಸಲಾಗ್ತಿದ್ಯಂತೆ. ಮೊದಲ ಸೀಸನ್ನಿಂದಲೇ ಅವರ ಡೇಟ್ಸ್‌ಗಾಗಿ ಕಾದಿದ್ವು ಆದ್ರೆ ಸಿಕ್ಕಿರಲಿಲ್ಲ. ಅವರಿದ್ದಲ್ಲಿಗೆ ಹೋಗಬಹುದು ಆದ್ರೆ, ಇದೇ ಸೆಟ್ಗೆ ಅವರ ಇಡೀ ಕುಟುಂಬವೆಲ್ಲಾ ಒಟ್ಟಾಗಿ ಬರಬೇಕು. ಹಾಗಾಗಿ ತುಂಬಾನೇ ಕಷ್ಟ ಆಗಿತ್ತು. ಈ ಬಾರಿ ಪ್ರಯತ್ನ ಮುಂದುವರೆದಿದೆ. ಸಾಧ್ಯವಾದ್ರೆ ಸೀಸನ್ 4ಗೆ ಸಾಧಕರ ಸೀಟ್ನಲ್ಲಿ ರಜಿನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ ಎಂದರು. ಇನ್ನು ಕಾರ್ಯಕ್ರಮದ ಮೊದಲ ಅಥಿತಿಯಾಗಿ ಡಾ.ವೀರೇಂದ್ರ ಹೆಗ್ಗಡೆಯವರು ಕಾಣಿಸಿಕೊಳ್ತಿದ್ದು ಇದೇ ಏಪ್ರಿಲ್ 20 ರಿಂದ ಕಾರ್ಯಕ್ರಮ ಶುರುವಾಗಲಿದೆ.ಇದೇ ಸೀಸನ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್ ಕೂಡ ಬರಲಿದ್ದಾರೆಂಬ ಸುದ್ದಿಯೂ ಇದೆ.
Comments