ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ ನಟಿ ಪ್ರಿಯಾಂಕಾ ಚೋಪ್ರಾ..! ಈ ಬಗ್ಗೆ ಪಿಗ್ಗಿ ಹೇಳಿದ್ದೇನು..?
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕಿರುಕುಳ ಆಗಿರುತ್ತದೆ.. ಈ ಬಗ್ಗೆ ಸ್ಟಾರ್ ನಟಿಯರು ಕೂಡ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ನಟಿ ಪ್ರಿಯಾಂಕ ಚೋಪ್ರ ಕೂಡ ಮಾತನಾಡಿದ್ದಾರೆ.ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ 10th Annual Women in the world summitನಲ್ಲಿ ಪಾಲ್ಗೊಂಡಿದ್ದರು.. ಈ ವೇಳೆ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಕಾರ್ಯಕ್ರಮಕ್ಕೆ ಬಂದಿದ್ದ ಹಲವರು ತಮಗಾಗಿದ್ದ ಅನುಭವಗಳನ್ನೂ ಅವರು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಲೈಂಗಿಕ ಶೋಷಣೆ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಪ್ರಿಯಾಂಕಾ, ನೇರವಾಗಿ ತಮ್ಮ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದು ಹೇಳಿ ಕೊಳ್ಳಲಿಲ್ಲವಾದರೂ ಬಹುತೇಕ ಎಲ್ಲ ಹೆಣ್ಣು ಮಕ್ಕಳಿಗೂ ಕೂಡ ಲೈಂಗಿಕ ಕಿರುಕುಳವಾಗುತ್ತಿರುತ್ತದೆ ಎಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರಿಗೆ ನಿಮಗೆ ಯಾವುದಾದರೂ ಇಂತಹ ಘಟನೆ ನಡೆದಿದೆಯಾ ಎಂಬ ಪ್ರಶ್ನೆಗೆ ಪ್ರಿಯಾಂಕ ಹೇನ್ ಹೇಳುದ್ರೂ ಗೊತ್ತಾ..?, '#MeToo ಅಂತಹ ಅಭಿಯಾನಗಳು ನಡೆಯುತ್ತಿರುವಾಗ ನಾವು ನಮ್ಮ ಅನುಭವ ಹಾಗೂ ಘಟನೆಗಳ ಬಗ್ಗೆ ಮಾತನಾಡಬಹುದಾಗಿದೆ. ಅಲ್ಲದೆ ನಾವು ನಮ್ಮ ಕತೆ ಹೇಳುವಾಗ ನಾವೊಬ್ಬರೇ ಇದನ್ನೆಲ್ಲ ಅನುಭವಿಸಿಲ್ಲ ಎನ್ನುವ ಭಾವ ಮೂಡುವುದು ಸಹಜ ಎಂದಿದ್ದಾರೆ..'ಈ ರೂಮ್ ನಲ್ಲಿರುವ ಎಲ್ಲ ಮಹಿಳೆಯರೂ ಯಾವುದಾದರೂ ಒಂದು ಲೈಂಗಿಕ ಕಿರುಕುಳವನ್ನು ಅನುಭವಿಸಿರುತ್ತಾರೆ. ಮಹಿಳೆ ಎನ್ನುವ ಪದದ ಜೊತೆಯಲ್ಲಿಯೇ ಲೈಂಗಿಕ ಕಿರುಕುಳ ಎನ್ನುವ ಪದ ಸಹ ಸೇರಿಕೊಂಡಿದೆ ಎಂದಿದ್ದಾರೆ. ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಕಹಿ ಅನುಭವಗಳನ್ನು ಅನುಭವಿಸುತ್ತಲೇ ಇರುತ್ತಾರೆ.. ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಬೇಕು ಎಂದು ಪ್ರಿಯಾಂಕ ಚೋಪ್ರ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
Comments