ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ಥ್ಯಾಂಕ್ಸ್ ಹೇಳಿದ್ಯಾಕೆ..!! ಕಾರಣ ಕೇಳುದ್ರೆ..!!!

ಮಂಡ್ಯ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ..ಅದರಲ್ಲೂ ಮಂಡ್ಯ ಅಖಾಡ ಮಾತ್ರ ಸಿಕ್ಕಾಪಟ್ಟೆ ಕಾವೇರುತ್ತಿದೆ. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ರಾಕಿಂಗ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ಮತಯಾಚನೆ ಮಾಡುತ್ತಿರುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಈ ಹಿನ್ನಲೆಯಲ್ಲಿ ದೋಸ್ತಿ ನಾಯಕರು 'ಯಶ್ ಹಾಗೂ ದರ್ಶನ್ ವಿರುದ್ದ ಹಲ್ಲು ಮಸೆಯುತ್ತಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ.. ಸಿಎಂ ಕುಮಾರಸ್ವಾಮಿಯವರು ಅವರಿಬ್ಬರನ್ನು ಜೋಡೆತ್ತು ಅಲ್ಲ ಕಳ್ಳೆತ್ತು ಎಂದಿದ್ದರು..
ಸುಮಲತಾ ಅಂಬರೀಶ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಾಕಿಂಗ್ ಸ್ಟಾರ್ ಯಶ್ , ಪುತ್ರ ಅಭಿಷೇಕ್ ಅಂಬರೀಶ್ , ನಟ ದೊಡ್ಡಣ್ಣ , ರೈತ ನಾಯಕ ಪುಟ್ಟಣ್ಣಯ್ಯ ಪುತ್ರ , ರಾಕಲೈನ್ ವೆಂಕಟೇಶ್ ಈ ಬೃಹತ್ ಮೆರವಣಿಗೆಯ ಮೂಲಕ ಸಮಾವೇಶದಲ್ಲಿ ಸಾಥ್ ನೀಡುತ್ತಿದ್ದರು.. ಎಷ್ಟು ಸಾಧ್ಯವೋ ಅಷ್ಟು ನನ್ನನ್ನ, ಸುಮಲತಾ ಅಮ್ಮನ್ನ, ನಮ್ಮ ಹೀರೋನ ಹೀಯಾಳಿಸಿದ್ರು ಪರವಾಗಿಲ್ಲ...!! ನಾನು ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ ಹೇಳೋಕೆ ತುಂಬಾ ಇಷ್ಟ ಪಡ್ತಿನಿ ಏಕೆ ಅಂದ್ರೆ ನೂರು ಜನರಲ್ಲಿ ಹತ್ತು ಜನ ಡಿ ಬಾಸ್ ಅಂತಿದ್ರು. ಆದ್ರೆ ಇವತ್ತು ಡಿ ಬಾಸ್ ಅಂತ ಕರ್ನಾಟಕಗೆ ಗೊತ್ತಾಗುವ ರೀತಿ ಮಾಡಿದ್ದರು... ಸುಮ್ಮನೆ ರೈತ ಅನ್ನೋದಲ್ಲ ಒಂದು ಲೋಟ ಹಾಲು ಕರೆದು ತೋರಿಸಲಿ ನೋಡೋಣ ಎಂದರು., ಒಂದು ಹಸು ಕರು ಹಾಕುತ್ತೆ ಆ ಹಸುಗೆ ಒಂದು ವಾರ ಕಾಲ ಏನು ಫುಡ್ ಹಾಕ್ತಾರೆ ಹೇಳಲಿ ನೋಡೋಣ ಎಂದ ದರ್ಶನ್ ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟರು.. ಒಟ್ಟಾರೆಯಾಗಿ ಮಂಡ್ಯ ರಾಜಕೀಯ ವಲಯದಲ್ಲಿ ಹೆಚ್ಚು ಸುದ್ದಿ ಮಾಡಿದ್ದಂತೂ ಸುಳ್ಳಲ್ಲ.,
Comments