ವಿಮಾನ ದುರಂತದಲ್ಲಿ ಸತ್ತಾಗ ಸೌಂದರ್ಯ 7 ತಿಂಗಳ ಗರ್ಭಿಣಿ…!!!

ಅಂದಹಾಗೇ ಹೆಸರಿಗೆ ತಕ್ಕಂತೆ ತುಂಬಾ ಸೌಂದರ್ಯವಾಗಿ, ಅಷ್ಟೇ ಪ್ರತಿಭಾವಂತೆಯೂ ಆದ ನಟಿ ಸೌಂದರ್ಯ ಇಂದು ನೆನಪು ಮಾತ್ರ. ಅವರ ಅಭಿನಯ ಅವರ ಬ್ಯೂಟಿಗೆ ಮರಳಾಗದವರೇ ಇಲ್ಲ. ಬಹುಭಾಷಾ ಕಲಾವಿದೆಯಾಗಿ ಸಿನಿಮಾ ರಂಗದಲ್ಲಿ ಅಬ್ಬರಿಸಿದ ಸೌಂದರ್ಯ ವಿಮಾನ ಅಪಘಾತದಲ್ಲಿ ಅಕ್ಷರಶಃ ಬೂದಿಯಾಗಿದ್ದರು. ದುರಂತಮಯವಾಗಿ ಸಾವನಪ್ಪಿದ ಸೌಂದರ್ಯ ಅಗಲಿ ಇಂದಿಗೆ 15 ವರ್ಷ ಕಳೆದಿದೆ.
2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಂಧ್ರ ಪ್ರದೇಶಕ್ಕೆ ತೆರಳಿದ್ದವರು ಶವವಾಗಿ ವಾಪಸ್ಸಾಗಿದ್ದರು.ಸೌಂದರ್ಯ ಜೊತೆ ಅವರ ಸಹೋದರ ಅಮರನಾಥ್ ಕೂಡ ಇದ್ದರು. ಅವರು ಕೂಡ ಸೌಂದರ್ಯ ಜೊತೆ ಅಸುನೀಗಿದ್ದರು. ಸೌಂದರ್ಯ ಸತ್ತಾಗ ಅವರ ವಯಸ್ಸು ಕೆವಲ 31 ವರ್ಷ ಆಗಿತ್ತು. ಸೌಂದರ್ಯ ಸತ್ತಾಗ ಅವರು 7 ತಿಂಗಳ ಗರ್ಭಿಣಿ ಆಗಿದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಅಂದಹಾಗೇ ಗಾಂಧರ್ವ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ದ್ವೀಪದ ರಾಣಿ ಸೌಂದರ್ಯ ಸರಿ ಸುಮಾರು 120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸಾಫ್ಟ್ ವೇರ್ ಎಂಜಿನಿಯರ್ ಜಿ.ಎಸ್ ರಘು ಅವರನ್ನು ವಿವಾಹವಾಗಿದ್ದರು.ಅದರ ಮರುವರ್ಷವೇ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಆರಂಭಿಸಿದ್ದರು.
Comments