‘ಆಕೆಯ ನಟನೆಯನ್ನು ನನ್ನಿಂದಂತೂ ನೋಡಲಾಗಲಿಲ್ಲ’ : ಖ್ಯಾತ ನಟಿಯ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಶ್ರದ್ಧಾ …?!!!

ಅಂದಹಾಗೇ ಕನ್ನಡದ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಯೂ ಟರ್ನ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ ವುಡ್ ಬಹು ಬೇಡಿಕೆ ನಟಿ. ಕನ್ನಡವಷ್ಟೇ ಅಲ್ಲದೇ ತೆಲುಗು ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರುವ ಸೂಪರ್ ಹೀರೋಯಿನ್. ಆದರೆ ಇವರು ಇನ್ನೊಬ್ಬ ಖ್ಯಾತ ನಟಿ, ಫೇಮಸ್ ಹೀರೋಯಿನ್ ಬಗ್ಗೆ ಹೇಳಿದ ಸ್ಟೇಟ್ ಮೆಂಟ್ ಕಾಂಟ್ರೋವರ್ಸಿ ಸೃಷ್ಟಿ ಮಾಡಿದೆ. ಅಂದಹಾಗೇ ಶ್ರದ್ಧಾ ಶ್ರೀನಾಥ್ ಅಭಿನಯಿಸಿರುವ ಯೂ ಟರ್ನ್ ಸಿನಿಮಾ ತೆಲುಗು ಭಾಷೆಗೂ ರಿಮೇಕ್ ಆಗುತ್ತಿದೆ. ಆ ರಿಮೇಕ್ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಸಮಂತಾ ಅವರ ತೆಲುಗು ಯೂ ಟರ್ನ್ ಸ್ಟಿಲ್ ಫೋಟೋ ರಿವೀಲ್ ಆದಾಗ ಸಿಕ್ಕಾಪಟ್ಟೆ ಕಾಂಪ್ಲಿಮೆಂಟ್ಸ್ ಸಿಕ್ಕಿತು.
ಅದೇನೆ ಇರಲಿ ಈಗ ಸಮಂತಾ ಆ್ಯಕ್ಟಿಂಗ್ ಬಗ್ಗೆಯೇ ಕನ್ನಡದ ಶ್ರದ್ಧಾ ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಎರಡು ಇಂಡಸ್ಟ್ರಿಯವರಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಗಂಡ ನಾಗಚೈತನ್ಯ ಜತೆ ಸಮಂತಾ ಅಭಿನಯಿಸಿರುವ 'ಮಜಲಿ' ಚಿತ್ರ ಬಾಕ್ಸಾಫಿಸ್ ಕೊಳ್ಳೆ ಹೊಡೆಯುತ್ತಿದೆ. ಅದರಲ್ಲೂ ಈ ಚಿತ್ರದಲ್ಲಿ ಸಮಂತಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಟೈಮ್ ನಲ್ಲಿ ಸಮಂತಾ ನಟನೆ ಬಗ್ಗೆ ಶ್ರದ್ಧಾ ಏನ್ ಮಾತನಾಡಿದ್ದಾರೆ ಗೊತ್ತಾ..?ವಾಹಿನಿಯೊಂದರ ಸಂದರ್ಶನದಲ್ಲಿ ಶ್ರದ್ಧಾಗೆ ತೆಲುಗು ಹಾಗೂ ತಮಿಳು 'ಯೂ ಟರ್ನ್' ಚಿತ್ರದಲ್ಲಿ ಸಮಂತಾರ ಅಭಿನಯದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ಶ್ರದ್ಧಾ, 'ಸಮಂತಾ ಅವರ ಅಭಿನಯವನ್ನು ನಾನು ಅರ್ಧ ಗಂಟೆಯೂ ಚಿತ್ರಮಂದಿರಲ್ಲಿ ಕುಳಿತು ನೋಡಲಾಗಲಿಲ್ಲ. ಕಾರಣ ನಾನು ಅಭಿನಯಿಸಿದ ಪಾತ್ರದಲ್ಲಿ ಬೇರೆಯವರನ್ನು ನನಗೆ ಊಹಿಸಿಕೊಳ್ಳಲಾಗುತ್ತಿಲ್ಲ' ಎಂದಿದ್ದಾರೆ.
ಈ ವಿಚಾರ ಟೆಲಿಕಾಸ್ಟ್ ಆಗುತ್ತಿದ್ದಂತೇ ಸಮಂತಾ ಅಭಿಮಾನಿಗಳು ಶ್ರದ್ಧಾ ಶ್ರೀನಾಥ್ ಮೇಲೆ ತಿರುಗಿ ಬಿದ್ದಿದ್ದಾರೆ. ಅಂದಹಾಗೇ ನಟನೆಯಲ್ಲಿ ಪಕ್ಕಾ, ಹಾಗೂ ತನಗಿಂತಲೂ ಸೀನಿಯರ್ ನಟಿಯಾಗಿರುವ ಸಮಂತಾ ಬಗ್ಗೆ ಮಾತನಾಡುವ ರೈಟ್ಸ್ ಶ್ರದ್ಧಾಗೆ ಇಲ್ಲ. ಅಷ್ಟೇ ಯಾಕೆ ತೆಲುಗು ಸಿನಿಮಾಗಳಲ್ಲಿ ನಟಿಸಿದ ಅನುಭವವೇ ಇಲ್ಲದ ಶ್ರದ್ಧಾ ನಾನಿ ಜೊತೆ ಜೆರ್ಸಿಯಲ್ಲಿ ನಟನೆ ಮಾಡುತ್ತಿದ್ದಾರೆ., ಇವರಿಗೇನು ಗೊತ್ತು ಸಮಂತಾ ನಟನೆ ಬಗ್ಗೆ ಎಂದು ಶ್ರದ್ಧಾ ಶ್ರೀನಾಥ್ ಬಗ್ಗೆ ಸಮಂತಾ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.
Comments