ಚಿಕ್ಕವಳಿದ್ದಾಗ ಮುದ್ದು ಮಾಡುತ್ತಿದ್ದವರು, ದೊಡ್ಡವಳಾದ ಮೇಲೆ ಮಂಚಕ್ಕೆ ಕರೆಯುತ್ತಿದ್ದರು : ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಟಿ...!!!
ಒಂದಷ್ಟು ದಿನ ಮೀಟೂದ್ದೇ ಸೌಂಡು.ಹಾಲಿವುಡ್ ನಿಂದಿಡಿದೂ ಸ್ಯಾಂಡಲ್ ವುಡ್ ತನಕವೂ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ರು ಕೆಲ ಸಿನಿಮಾ ತಾರೆಯರು. 'ಮೀಟೂ' ಬಾಲಿವುಡ್ ನಂತರ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿತು. ಮೀಟೂ ಅಡಿನಟಿ ಶೃತಿ ಹರಿಹರನ್ ಖ್ಯಾತ ನಟ ಅರ್ಜನ್ ಮೇಲೆ ಲೈಂಗಿಕ ಆರೋಪ ಹೊರಿಸಿದ್ರು. ಸದ್ಯ ಪ್ರಕರಣ ಕೋರ್ಟ್ ನಲ್ಲಿದೆ. ಸದ್ಯ ಮತ್ತೊಬ್ಬ ನಟಿ ತಾವು ಸಿನಿಮಾಗೆ ಬಂದ ಕೆಲ ಆರಂಭದ ಕರಾಳ ದಿನಗಳು ಹೇಗಿದ್ದವು... ಯಾವ ರೀತಿ ದೌರ್ಜನ್ಯಕ್ಕೆ ನಾನು ಒಳಗಾಗಿದ್ದೆ ಎಂದು ಬಿಡಿಸಿ ಹೇಳಿದ್ದಾರೆ.
ಅಂದು ನಾನು ಚಿತ್ರರಂಗ ಪ್ರವೇಶ ಮಾಡಿದೆ. ಬಾಲ ನಟಿಯಾಗಿ ಪ್ರವೇಶ ಮಾಡಿದ ದಿನಗಳು ತುಂಬಾ ಚೆನ್ನಾಗಿದ್ದವು. ಆರಂಭದ ದಿನಗಳು ನನಗೆ ನಟನೆ ಮಾಡಲು ಸ್ಫೂರ್ತಿ ತುಂಬಿದವು. ಆದರೆ ನಾನು ದೊಡ್ಡವಳಾಗುತ್ತಿದ್ದಂತೇ ಅಲ್ಲಿನವರ ವರ್ತನೆಯೇ ಬದಲಾಯ್ತು. ನಾನು ಚಿಕ್ಕವಳಿದ್ದಾಗ ಮುದ್ದು ಮಾಡುತ್ತಿದ್ದವರು, ನಾನು ದೊಡ್ಡವಳಾದ ಬಳಿಕ ನನ್ನನ್ನೇ ಮೈ-ಕೈ ಮುಟ್ಟಿ ಸವರುತ್ತಿದ್ದರು ಎಂದು ದುಃಖದಿಂದ ಹೇಳುತ್ತಾರೆ ನಟಿ ರೀಚಾ ಭದ್ರಾ.ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಿಚಾ ಭದ್ರ, ತಾವು ಚಿತ್ರರಂಗದಲ್ಲಿ ಅವಕಾಶ ಕೋರಿ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಭೇಟಿ ಮಾಡಿದ್ದ ವೇಳೆ, ಇಬ್ಬರು ತಮ್ಮನ್ನು ಸಂತೋಷ ಪಡಿಸಿದರೆ ಕೆಲಸ ನೀಡುವುದಾಗಿ ನೇರವಾಗಿಯೇ ಹೇಳಿದ್ದರು ಎಂಬುದನ್ನು ವಿಷಾದದಿಂದಲೇ ಹೇಳಿಕೊಳ್ಳುತ್ತಾರೆ. ನಾನು ಅದನ್ನೆಲ್ಲಾ ತಿರಸ್ಕರಿಸಿದೆ. ಅವರುಗಳ ಬೇಡಿಕೆಯನ್ನು ತಿರಸ್ಕರಿ ನನ್ನ ದಾರಿಯಲ್ಲಿ ಸಾಗಿದೆ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ಕಾಳಜಿ ಹೊಂದಿರುವುದರಿಂದ ಮಿತಿಯನ್ನು ದಾಟಲು ನಾನು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ರೀಚಾ ಕಿರುತೆರೆಯಲ್ಲಿ ಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Comments