ಬ್ಯಾಚುಲರ್ ಲೈಫ್'ಗೆ ಗುಡ್ ಬೈ ಹೇಳಿ ಸಪ್ತಪದಿ ತುಳಿದ 'ಕೆಜಿಎಫ್' ವಿಲನ್..

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ಗೆ ಒಂದೊಳ್ಳೆ ಬ್ರೇಕ್ ತಂದುಕೊಟ್ಟಿತು.. ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೆ ಅಲ್ಲದೆ ಪರಭಾಷೆಗಳಲ್ಲೂ ಕೂಡ ರಿಲೀಸ್ ನಮ್ಮ ಕನ್ನಡದ ಹಿರಿಮೆಯನ್ನು ಎಲ್ಲೆಡೆ ಸಾರಿತು..ಅದರಲ್ಲಿ ಅಭಿನಯಿಸಿದ ಪ್ರತಿಯೊಬ್ಬರು ಕೂಡ ಯಶಸ್ಸಿನ ಗುರಿಯನ್ನು ತಲುಪಿದರು.. ಇದೀಗ ಕೆಜಿಎಫ್ ನಲ್ಲಿ ಅಭಿನಯಿಸಿದ ವಿಲನ್ ಕಂಕಣಭಾಗ್ಯ ಕೂಡಿ ಬಂದಿದೆ..
ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಿ ಹವಾ ಸೃಷ್ಟಿಸಿತ್ತು. ಈಗ ಇದೇ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ನಟ ಜಾನ್ ಕೊಕ್ಕೇನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಜಾನ್ ಕೊಕ್ಕೇನ್ ಅವರು ‘ಕೆಜಿಎಫ್’ ಸಿನಿಮಾದಲ್ಲಿ ಜಾನ್ ಎಂಬ ವಿಲನ್ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಕೊಕ್ಕೇನ್ ಅವರು ಮೂಲತಃ ಕೇರಳದ ಹುಡುಗಿಯಾದ ಪ್ರಿಯಾ ರಾಮಚಂದ್ರನ್ ಜೊತೆ ಸಪ್ತಪದಿ ತುಳಿದು ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ್ದಾರೆ. ಜಾನ್ ಕೊಕ್ಕೇನ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕುವ ಮೂಲಕ ತಮ್ಮ ಮದುವೆಯ ಬಗ್ಗೆ ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ವಿಷು ಹಬ್ಬವನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಹಬ್ಬದ ದಿನೇ ತಮ್ಮ ಗೆಳತಿಯಾದ ಪ್ರಿಯ ಅವರನ್ನು ವಿವಾಹವಾಗಿದ್ದಾರೆ. ಕೆಜಿಎಫ್ ನ ಈ ವಿಲನ್ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.
Comments