ಸಾಯಿ ಪಲ್ಲವಿ 2 ಕೋಟಿ ಆಫರ್ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ..? ಕೊಟ್ಟ ರೀಸನ್’ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು…?!!!

ನಟಿ ಸಾಯಿ ಪಲ್ಲವಿ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಬಂದವರು, ನಂತರ ನಟಿಯಾಗಿ ಹಿಟ್ ಸಿನಿಮಾಗಳನ್ನು ಕೊಟ್ಟು ಸ್ಟಾರ್ ಹೀರೋಯಿನ್ ಆದ್ರು. 'ಫಿದಾ' ಮೂಲಕ ಅಭಿಮಾನಿಗಳ ಮನದಲ್ಲಿ ನೆಲೆ ನಿಂತಿರುವ ಸಾಯಿ ಪಲ್ಲವಿ ಕಾಂಟ್ರೋವರ್ಸಿಗೂ ಒಳಗಾಗಿದ್ದರು. ಈಗಾಗಲೇ ನಟಿಯನ್ನು ಮದುವೆಯಾಗಿರುವ ನಿರ್ದೇಶಕನ ಜೊತೆ ಸಾಯಿ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೂ ಇತ್ತು. ಸದ್ಯ ತೆಲುಗು, ಮಲಯಾಳಿ ಸಿನಿಮಾದಲ್ಲಿ ಟಾಪ್ 1 ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಒಂದು ಬಿಗ್ ಪ್ರಾಜೆಕ್ಟ್ ನ್ನು ರಿಜೆಕ್ಟ್ ಮಾಡಿದ್ದಾರೆ.
ಇವರಿಗೆ ಖ್ಯಾತ ಜಾಹೀರಾತು ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ. ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕಿತ್ತು.
ಈ ಫೇಸ್ ಕ್ರೀಂ ಸಂಸ್ಥೆ ಸಾಯಿ ಪಲ್ಲವಿಯನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದೆ. ಆಫರ್ ನೀಡಿ , ನೀವೇ ನಮಗೆ ಸೂಕ್ತವೆಂದು ತಿಳಿಸಿದೆ. ಆದರೆ ಈ ಬಿಗ್ ಆಫರ್'ನ್ನು ಸಾಯಿ ಪಲ್ಲವಿ ತಿರಸ್ಕರಿಸಿದರಂತೆ. ಸಾಯಿ ಪಲ್ಲವಿ ಆಫರ್ ಕೈ ಬಿಡಲು ಸೂಕ್ತ ಕಾರಣವಿದ್ಯಂತೆ. ಮೊದಲು ಸಂಸ್ಥೆಯವರು ಇದೊಂದು ಫೇರ್'ನೆಸ್ ಕ್ರೀಂ ಜಾಹೀರಾತು. ನೀವೇ ನಮಗೆ ಸೂಕ್ತವಾದವರು ಎಂದು ತಿಳಿಸಿದ್ದಾರೆ. ಅಂದಹಾಗೇ ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ….ಅವರಿಗೆ ಬಂದ ಆಫರ್ ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಂದಹಾಗೇ ಸಾಯಿ ಪಲ್ಲವಿಯವರು ನೈಜವಾಗಿ ಗುರುತಿಸಿಕೊಳ್ಳುತ್ತಾರೆ. ಎಂದೂ ಹೆಚ್ಚಾಗಿ ಮೆಕಪ್ ಮಾಡುವುದಿಲ್ಲ. ತಾವಿದ್ದ ಹಾಗೆಯೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಫೇರ್'ನೆಸ್ ಕ್ರೀಂ ನಿಂದ ನಾನು ಜನರಿಗೆ ಸುಳ್ಳು ಹೇಳಿದಂತೇ ಆಗುತ್ತದೆ.ಸಾಯಿ ಪಲ್ಲವಿ ಮುಖದಲ್ಲಿ ಮೊಡವೆ ಇದೆ. ಅವರಿರುವಾಗೆ ಸಿನಿಮಾದಲ್ಲಿ ಕಾಣಿಸಿಕೊಂಡು ನೆಲೆ ನಿಂತಿದ್ದಾರೆ.
Comments