ಕ್ರೇಜಿಸ್ಟಾರ್ ಮಗಳ ಮದುವೆಯ ದಿನಾಂಕ ಫಿಕ್ಸ್…! ರವಿಮಾಮ ಮಗಳಿಗೆ ಕೊಟ್ಟ ಗಿಫ್ಟ್ ಏನ್ ಗೊತ್ತಾ..?!!!
ಅಂದಹಾಗೇ ಕ್ರೇಜಿಸ್ಟಾರ್ ನಟ ರವೀಚಂದ್ರನ್ ಅವರ ಮಗಳ ಎಂಗೇಜ್ ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ಚಿತ್ರರಂಗದ ಅನೇಕ ಗಣ್ಯರು, ಬಂಧು ಮಿತ್ರರು ರವಿಮಾನ ಮಗಳ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಇದೀಗ ಮಗಳ ಮದುವೆ ದಿನಾಂಕವೂ ಗೊತ್ತಾಗಿದೆ. ಎಂಗೇಜ್ ಮೆಂಟ್ ಆದ ಮೇಲೆ ಕ್ರೇಜಿಸ್ಟಾರ್ ಮದುವೆಗಾಗಿ ಬ್ರೇಕ್ ತೆಗೆದುಕೊಂಡಿದ್ದರು. ಸದ್ಯ ಪ್ರೀತಿಯ ಮಗಳ ಮದುವೆ ಖುಷಿಯಲ್ಲಿದ್ದಾರಂತೆ.
ಅಂದಹಾಗೇ ಮೇ ತಿಂಗಳು 27 ಮತ್ತು 28 ರಂದು ರವಿಮಾಮನ ಮಗಳು ನೂತನ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನಿಂಗ್ ರಿಯಾಲಿಟಿ ಶೋ-ವೊಂದರಲ್ಲಿ ಜಡ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಮಗಳ ನೆನಪು ಮಾಡಿಕೊಂಡು ಕಣ್ಣೀರು ತುಂಬಿಕೊಂಡಿದ್ದರು.ಮಗಳ ಮದುವೆ ಮಾಡಿಕೊಂಡು ಹೋಗುತ್ತಿದ್ದಾಳೆ ಎಂಬುದನ್ನು ನೆನಸಿಕೊಂಡರೇ ದುಃಖವಾಗುತ್ತದೆ. ನನ್ನ ಪ್ರೀತಿಯ ಮಗಳ ಎಂಗೇಜ್ ಮೆಂಟ್ ನ್ನು ತಾವಂದುಕೊಂಡಂತೇ ಡೆಕರೋಷನ್ ಮಾಡಿದ ಸ್ಯಾಂಡಲ್ವುಡ್ ನ ಕನಸುಗಾರ, ಮದುವೆ ಕೂಡ ತಾನಂದುಕೊಂಡ ಹಾಗೇ ನಡೆಯಬೇಕಂತೆ. ಡ್ಯಾನ್ಸಿಂಗ್ ರಿಯಾಲಿಟಿ ಶೋ'ನಲ್ಲೇ ಮಗಳಿಗಾಗಿ ಗಿಫ್ಟ್’ವೊಂದನ್ನು ನೀಡಿದ್ದಾರೆ.ತಾವೇ ಹಾಡು ಬರೆದು ಕಂಪೋಸ್ ಮಾಡಿ ಹಾಡಿದ್ದಾರೆ. ಯಾಕೋ ಚಡಪಡಿಕೆ ಮೊದಲೆಲ್ಲಾ ನೀ ಮಗು,
ನಾನೀಗ ಮಗು ಎಂಬ ಹಾಡನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ರವೀ ಸರ್ ಮನಸಲ್ಲಿ ತಮ್ಮ ಮಗಳ ಮದುವೆಯನ್ನು ಹೀಗೆ ಮಾಡಬೆಕು, ಹಾಗೇ ಮಾಡಬೇಕು ಎಂಬ ಕಲ್ಪನೆ ಇದ್ಯಂತೆ. ಅದರಂತೇ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೇ ರವಿಚಂದ್ರನ್ ಅವರು ಯಾವತ್ತು ತಮ್ಮ ನೋವನ್ನು ಫ್ಯಾಮಿಲಿಗೆ ತೋರಿಸಿಲ್ವಂತೆ. ಆದರೆ ಅದ್ಯಾಕೋ ನನ್ನ ಮಗಳಿಗೆ ಗೊತ್ತಾಗಿ ಬಿಡುತ್ತದೆ ಎಂದರು. ನನ್ನ ಮಗಳ ಮದುವೆ ಹತ್ತಿರ ಬರುತ್ತಿದೆ. ಇಲ್ಲಿಯವರೆಗೂ ಏನು ಅನಿಸಿರಲಿಲ್ಲ, ಆದರೆ ಎರಡು ವಾರಗಳಿಂದ ನನ್ನ ಮನಸ್ಸು ಭಾರವಾಗಿದೆ. ಏನೋ ಕಸಿವಿಸಿ, ಏನೋ ಕಳಕೊಂಡರ ಭಾವ ನನಗನಿಸುತ್ತಿದೆ ಎಂದು ವೇದಿಕೆಯಲ್ಲಿ ಹಂಚಿಕೊಂಡರು. ಒಟ್ಟಾರೆ ರವೀಚಂದ್ರನ್ ಸಿನಿಮಾ ಅಂದ್ರೆನೆ ಲಕ್ಷುರಿ, ಇನ್ನು ಮಗಳ ಮದುವೆ ಅಂದ್ರೆನಾ ಸುಮ್ನೆನಾ..ಈಗಾಗಲೇ ಪ್ಲ್ಯಾನ್ ಮಾಡಿದ್ದಾರೆ. ಸೆಲೆಬ್ರಿಟಿಗಳಾದರೇನು, ಸಾಮಾನ್ಯರಾದರೆನು, ತಂದೆ ಮಗಳ ಪ್ರೀತಿಗೆ ಬೆಲೆ ಕಟ್ಟಲಾಗುತ್ತದೆಯೇ..?!
Comments