ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸ್ಟಾರ್'ನಟನ ಮಗಳು...!
ನಿನ್ನೆ ತಾನೇ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಉತ್ತೀರ್ಣರಾದ ಮಕ್ಕಳಲ್ಲಿ ಸಂತಸ, ಹರುಷ ಮನೆ ಮಾಡಿದೆ. ಅಂದಹಾಗೇ ಚಂದನವನದ ಸ್ಟಾರ್ ನಟರೊಬ್ಬರ ಮಗಳು ಪಿಯು ಪರೀಕ್ಷೆ ಪಾಸ್ ಮಾಡಿದ ಖುಷಿಯಲ್ಲಿದ್ದಾರೆ. ಅಪ್ಪ-ಅಮ್ಮನ ಮುದ್ದಿನ ಮಗಳು ದ್ವಿತೀಯ ಪಿಯುಸು ಪರೀಕ್ಷೆಯಲ್ಲಿ ಅತ್ತುತ್ತಮ ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.
ಸೆಲೆಬ್ರಿಟಿ ಮಕ್ಕಳು ಅಂದಾಕ್ಷಣ ಎಲ್ಲರ ನೋಟವು ದೊಡ್ಡದಿರುತ್ತದೆ. ಅದರಲ್ಲೂ ಸಿನಿಮಾ ನಟರ ಮಕ್ಕಳೆಂದರೆ ಕುತೂಹಲ ಜಾಸ್ತಿಯೇ. ಬಹುತೇಕ ಸಿನಿ ನಟರ ಮಕ್ಕಲು ಸಾಂಸ್ಕೃತಿಕ ಕಲೆ, ಅಥವಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವರಷ್ಟೇ ತಮ್ಮದೇ ಹಾದಿ ಸೃಷ್ಟಿಸಿಕೊಂಡಿರುತ್ತಾರೆ. ಅಂದಹಾಗೇ ಈ ಬಾರಿ ಪಿಯುಸಿಯಲ್ಲಿ ಶೇ.91 ತೆಗೆದು ತೇರ್ಗಡೆಯಾಗಿರೋದು ಬೇರೆ ಯಾರುಲ್ಲ. ನೆನಪಿರಲಿ ಪ್ರೇಮ್ ಅವರ ಮುದ್ದಿನ ಮಗಳು. ಪ್ರೇಮ್ ಪುತ್ರಿ ಅಮೃತಾ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದು,ಈ ಮೂಲಕ ತಂದೆ- ತಾಯಿಯ ಕೀರ್ತಿ ಹೆಚ್ಚಿಸಿದ್ದಾರೆ.ಅಂದಹಾಗೇ ಪ್ರೇಮ್ ಅವರ ಮಗಳು ಅಮೃತಾ ಎಸ್ಎಸ್ಎಲ್ಸಿ ಸಿ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದಿದ್ದರು. ಸದಾ ಓದು ಇನ್ನಿತರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅಮೃತಾ ಹಾಗೇಯೇ ಮಗ ಕೂಡ ಎಂಟನೇ ತರಗತಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದಾನೆ. ತಮ್ಮಮಗಳ ಸಾಧನೆಯನ್ನು ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Comments