ಶಾಕಿಂಗ್..!!! ಕ್ಯಾಂಪೇನ್ ಮಾಡುತ್ತಲೇ ಕುಸಿದುಬಿದ್ದು ಸಾವನ್ನಪ್ಪಿದ ಸ್ಟಾರ್ ನಟ...?!!!

15 Apr 2019 5:20 PM | Entertainment
4239 Report

ಪ್ರಚಾರ ಮಾಡುತ್ತಿದ್ದ ವೇಳೆ ಸ್ಟಾರ್ ನಟಟರೊಬ್ಬರು ಅಭಿಮಾನಿಗಳ  ಎದುರೇ ಕುಸಿದು ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ  ಕ್ಯಾಂಪೇನ್ ಮಾಡುತ್ತಿದ್ದ ಸ್ಟಾರ್ ನಟರೊಬ್ಬರು  ಪ್ರಚಾರದ ನಡುವೆಯೇ ನಿಧನರಾಗಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಕ್ಯಾಂಪೇನ್ ಮಾಡುತ್ತಿದ್ದ ತಮಿಳಿನ ಖ್ಯಾತ ನಟ ಜೆಕೆ ರಿತೇಶ್ ಅವರಿಗೆ ಹೃದಯಘಾತವಾಗಿದ್ದು, ಅಲ್ಲೇ ಕುಸಿದುಬಿದ್ದು ಸಾವನಪ್ಪಿದ್ದಾರೆ.

ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ  ಅದಾಗಲೇ ನಟ ಪ್ರಾಣ ಬಿಟ್ಟಿದ್ದರು. ತಮ್ಮ ನೆಚ್ಚಿನ ನಟನ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳು ತಾವು ನೋಡು ನೋಡುತ್ತಿದ್ದಂತೇ ನಟ ಕುಸಿದು ಬಿದ್ದುದ್ದು ಅಭಿಮಾನಿಗಳು ಕಂಗಾಲಾಗಿದ್ದಾರೆ. ಅಗಲಿದ ನಟ ಅಪಾರ ಅಭಿಮಾನಿಗಳನ್ನು  ತೊರೆದಿದ್ದಾರೆ. 2007 ರಲ್ಲಿ ಚಿತ್ರರಂಗ ಪ್ರವೇಶಿಸಿದ  ನಟ ರಿತೇಶ್, ಹಲವಾರು  ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇವರಿಗೆ 10 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಪಾಪ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ  ಆ ಮಕ್ಕಳನ್ನು ನೋಡಿದರೇ ಅಯ್ಯೋ ಅನಿಸುತ್ತದೆ.Related image

Edited By

Kavya shree

Reported By

Kavya shree

Comments