ಇದೇ ಮೊದಲ ಬಾರಿಗೆ ಶಿವಣ್ಣ ಮಾಧ್ಯಮದವರ ಮೇಲೆ ಗರಂ…!!!!

ಶಿವಣ್ಣ ಈ ಬಾರಿ ಮಾಧ್ಯಮದವರ ಮೇಲೆ ಗುಡುಗಿದ್ದಾರೆ. ‘ಕವಚ’ ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಮಾದ್ಯಮ ಮಿತ್ರರನ್ನು ಕುರಿತಾಗಿ ಒಂದೆರಡು ಮಾತುಗಳನ್ನಾಡಿದ್ರು. ನಾನು ಇಂಡಸ್ಟ್ರಿಗೆ ಬಂದು 30 ವರ್ಷಗಳು ಕಳೆದಿವೆ. ಆಗಿನದ್ದಕ್ಕೂ, ಈಗಿನದ್ದಕ್ಕೂ ತುಂಬಾ ವ್ಯತ್ಯಾಸಗಳಿವೆ. ಟಿವಿ ವಾಹಿನಿಗಳು ಹಿಂದಿಗಿಂತಲೂ ಇಂದು ಹೆಚ್ಚಾಗಿವೆ. ಬಹಳ ಬೇಗ ಮಾದ್ಯಮದವರಿಗೆ ನಾವೆಲ್ಲಾ ಹತ್ತಿರವಾಗಿ ಬಿಡುತ್ತೇವೆ. ಬಹಳ ವೇಗವಾಗಿ ಸುದ್ದಿಗಳು ಜನರನ್ನು ಮುಟ್ಟುತ್ತಿವೆ. ಆದರೆ ಕೆಲ ದಿನಗಳಿಂದ ನಾನು ನೋಡುತ್ತಿದ್ದೇನೆ.
ಕೆಲ ಮಾಧ್ಯಮ ವಾಹಿನಿಗಳು ಸಿನಿಮಾದವರನ್ನು ನಿರ್ಲಕ್ಷಿಸಿ ಬಿಟ್ಟಿವೆ.ಪ್ರತೀ ಬೆಳಗ್ಗೆ-ಸಂಜೆ ಬರೇ ರಾಜಕೀಯವನ್ನು ಹಾಕಿ ಬಿಡುತ್ತಾರೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಮ್ಮ ಕಡೆ ಸ್ವಲ್ಪ ನೋಡಿ, ನಮ್ಮನ್ನ ದಿನಾ ಪೂರ್ತಿತೋರಿಸಿ ಅಂತಾ ಕೇಳುತ್ತಿಲ್ಲ. ಆದರೆ ಸ್ವಲ್ಪ ಇತ್ತ ಗಮನ ಹರಿಸುವುದನ್ನೇ ಬಿಟ್ಟಿವೆ ಕೆಲ ಮಾಧ್ಯಮಗಳು ಎಂದು ವಿಷಾಧ ವ್ಯಕ್ತಪಡಿಸಿದರು.ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ಮುಳುಗಿ, ಕನ್ನಡ ಸಿನಿಮಾಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಶೇಷವಾ ಗಿಟಿವಿ ಚಾನಲ್ ಗಳು ಬರಿ ಎಲೆಕ್ಷನ್ ಕುರಿತಾಗಿ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಿದೆ ಎಂದು ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸರ್’ ಬಿಡುವು ಇದ್ದಾಗ ಬರುತ್ತೀರಿ.ನಾವು ನಿಮಗೆ ಅಷ್ಟೇ ಗೌರವ ಕೊ್ಟು ನೀವು ಕೇಳಿದ ರೀತಿಯಲ್ಲಿ ಬೈಟ್ ಕೊಡುವುದಿಲ್ಲವೇ…,? ಒಳ್ಳೊಳ್ಳೆ ಸಿನಿಮಾಗಳು ಬಂದಾಗ ಅವುಗಳ ಬಗ್ಗೆ ಮಾತನಾಡುವುದೇ ಇಲ್ಲ. ಕಾಲ ಹೀಗೆಯೇ ಇರಲ್ಲಾ ಸರ್ ಖಂಡಿತಾ ಬದಲಾಗುತ್ತದೆ ಎಂದರು.ಇದನ್ನು ನೀವು ವಾರ್ನಿಂಗ್ ಎಂದು ಭಾವಿಸ ಬೇಡಿ, ನಮ್ಮ ಮನಸ್ಸಿಗೆ ಅಷ್ಟು ಬೇಸರವಾಗಿದೆ. ವಾಹಿನಿಗಳು ನಮ್ಮನ್ನು ಮರತೇ ಬಿಟ್ಟಿವೆ ಎಂದು ಹೇಳಿದರು.
Comments