ಹೆತ್ತ ತಾಯಿಯನ್ನೇ ಹೊರ ಹಾಕಿದ ಸ್ಟಾರ್ ಹೀರೊಯಿನ್ : ಆಕೆ ಹೇಳಿದ್ದು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ...?!!!
ಖ್ಯಾತ ಸ್ಟಾರ್ ನಟಿಯೊಬ್ಬರು ಹೆಸರು ದುಡ್ಡು ಎಲ್ಲಾ ಮಾಡಿದ್ದಾರೆ. ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಹೃದಯ ಕದ್ದ ಚೆಲುವೆ ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ..? ನಾಯಕ ನಟಿಯರು, ನಟರು ನಮಗೆ ಆದರ್ಶವಾಗ ಬೇಕು ಎಂದು ನಾವು ಭಾವಿಸುತ್ತೇವೆ. ಆದರೆ ಅವರದ್ದು ಬಣ್ಣದ ಲೋಕವೇ ಬೇರೆ, ರಿಯಲ್ ಲೈಫೇ ಬೇರೆ. ಹಾಗೆಂದು ತೋರಿಸಿಕೊಟ್ಟು ಅಭಿಮಾನಿಗಳ ಮನಸಲ್ಲಿ ನಟಿಯ ಬಗ್ಗೆ ತಿರಸ್ಕಾರ ಮೂಡಿಸಿದ್ದು ಈ ನಾಯಕಿ. ಸುದೀಪ್ ಜೊತೆ ತೆರೆ ಹಂಚಿಕೊಂಡ ಈಕೆ ಮುದ್ದು ಮುದ್ದಾಗಿ ನಟಿಸಿ ಎಲ್ಲರನ್ನು ಸೆಳೆದಿದ್ದಳು. ಸೆಲೆಬ್ರಿಟಿ ಆದ ಮೇಲೆ, ನೇಮು-ಫೇಮು ಸಿಕ್ಕಿದ ಮೇಲೆ, ಇವರ ಹೀಗ್ ಮಾಡೋದಾ ಎಂದು ಬೆರಳು ತೋರಿಸಿ ನೋಡುವ ಹಾಗೇ ಸುದ್ದಿಯಾಗಿದ್ರು. ಆದರೆ ಅಸಲಿಗೆ ನಡೆದಿದ್ದೇ ಬೇರೆ ಎಂದು ಕಣ್ಣೀರಿಟ್ಟಿದ್ದಾರೆ ಸ್ಟಾರ್ ಹೀರೋಯಿನ್…
ಎಂಥಾ ವಿಪರ್ಯಾಸ ನೋಡಿ ತಾನೆತ್ತ ತಾಯಿಯನ್ನು ಈ ಫೇಮಸ್ ನಟಿ ಏನ್ ಮಾಡಿದ್ದಾರೆ ಗೊತ್ತಾ..? ಆ ನಾಯಕಿ ಯಾರು ಅಲ್ಲಾ, ‘ನಲ್ಲ’ ಸಿನಿಮಾ ಹೀರೋಯಿನ್. ಸುದೀಪ್ ಜೊತೆ ನಟಿಸಿ ಕನ್ನಡಿಗರ ಮನಗೆದ್ದ ಈಕೆ ತಾನೆತ್ತ ತಾಯಿಯನ್ನ ಮನೆಯಿಂದ ಹೊರ ಹಾಕಿದ್ದಾರೆ. ಕಾರಣ ಏನ್ ಗೊತ್ತಾ..? ನಟಿ ಸಂಗೀತಾ ‘ನಲ್ಲ’ ಸೇರಿದಂತೇ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಕೆ ಖ್ಯಾತ ಸಿಂಗರ್ ಕ್ರಶ್ ಅವರನ್ನು ಮದುವೆಯಾಗಿದ್ದಾರೆ. ಇತ್ತೀಚಿಗೆ ಸಂಗೀತಾ ತಾಯಿ ಮಗಳ ಮೇಲೆ ದೊಡ್ಡದೊಂದು ಆರೋಪ ಮಾಡಿದ್ದರು. ನನ್ನ ಮಗಳು ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ. ನನ್ನ ವಯಸ್ಸು ನೋಡದೇ ನನ್ನನ್ನು ತಿರಸ್ಕಾರದಿಂದ ಮನೆಯಿಂದ ಹೊರ ದೂಡಿದ್ದಾಳೆಂದು ಆರೋಪಿಸಿದ್ದಾರೆ. ಕಾರಣ, ನನ್ನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಟಿ ಸಂಗೀತಾ ತಾನೆತ್ತ ತಾಯಿಯನ್ನೇ ಹೊರ ನೂಕಿದ್ದಾಳೆಂದು ಆರೋಪಿಸಿದ್ರು. ಆದರೆ....
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಂಗೀತ ಹೇಳಿದ್ದೇನು ಗೊತ್ತಾ..?ಕೇಳಿದ್ರೆ ಶಾಕ್ ಆಗ್ತೀರಾ..!!!
ನನ್ನ ತಾಯಿಗೆ ತುಂಬು ಹೃದಯದ ಧನ್ಯವಾದ, ತನ್ನನ್ನು 13 ನೇ ವಯಸ್ಸಿಗೆ ಕೆಲಸಕ್ಕೆ ಸೇರುವಂತೆ ಮಾಡಿದ ತನ್ನ ತಾಯಿಗೆ ಹೃದಯಪೂರ್ವ ಧನ್ಯವಾದಗಳು. ಇಷ್ಟವಿಲ್ಲದಿದ್ದರೂ ಒತ್ತಾಯವಾಗಿ ನನ್ನನ್ನು ಕೆಲಸಕ್ಕೆ ಸೇರಿಸಿದ ಆ ನನ್ನಮ್ಮನಿಗೆ ನಿಜಕ್ಕೂ ಥ್ಯಾಂಕ್ಸ್. ಖಾಲಿ ಚೆಕ್ ನಲ್ಲಿ ನನ್ನ ಕೈಯಿಂದ ಸಹಿ ಮಾಡಿಸಿದ ನನ್ನ ತಾಯಿಗೆ ತುಂಬಾ ಥ್ಯಾಂಕ್ಸ್. ಡ್ರಗ್ಸ್'ಗೆ ದಾಸನಾಗಿ ಕೆಲಸ ಮಾಡದೇ ಮನೆಯಲ್ಲಿ ಕುಳಿತಿದ್ದ ನಿನ್ನ ಮಗನ ಸಲುವಾಗಿ ನನ್ನನ್ನು ಮನೆಯಿಂದ ಆಚೆ ಹಾಕಿದ ನನ್ನ ತಾಯಿಗೆ ತುಂಬಾ ಧನ್ಯವಾದ. ನನಗಿಷ್ಟವಾದ ಹುಡುಗನನ್ನು ಮದುವೆಯಾಗಲು ಬಿಡದೆ ಹೋರಾಟ ಮಾಡುವಂತೆ ಮಾಡಿದ ನನ್ನ ತಾಯಿಗೆ ನಿಜಕ್ಕೂ ಧನ್ಯವಾದ. ಮದುವೆಯ ನಂತರವೂ ನನ್ನ ಹಾಗೂ ನನ್ನ ಕುಟುಂಬಕ್ಕೆ ಕಿರುಕುಳ ಕೊಟ್ಟ ತಾಯಿಗೆ ಧನ್ಯವಾದಗಳು. ಓರ್ವ ತಾಯಿ ಹೀಗೆ ಇರಬಾರದೆಂದು ತೋರಿಸಿಕೊಟ್ಟಿದ್ದಕ್ಕೆ ನಿಜಕ್ಕೂ ಧನ್ಯವಾದಗಳೆಂದು ತಾನು ತನ್ನ ತಾಯಿಯಿಂದ ಅನುಭವಿಸಿದ ಕಷ್ಟಗಳನ್ನು ಮತ್ತು ಆಕೆ ಮಾಡಿದ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾಳೆ ನಟಿ ಸಂಗೀತ. ತಾನು ಮಾಡದೇ ಇರುವ ತಪ್ಪಿಗೆ ನನ್ನ ಗೌರವ ಹಾಳು ಮಾಡುತ್ತಿರುವ ನನ್ನ ತಾಯಿ ಮಹಾ ಸುಳ್ಳಿಗಾತಿ ಎಂದು ಸಂಗೀತ ಆರೋಪಿಸಿದ್ದಾರೆ.
Comments