ಮರುಭೂಮಿಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ವುಡ್ ನಟಿ…!

ಇಂದು ಸ್ಯಾಂಡಲ್'ವುಡ್ ನಟಿಯ ಬರ್ತ್ ಡೇ. ತಮ್ಮ ಹುಟ್ಟು ಹಬ್ಬವನ್ನು ರಾಜಸ್ಥಾನದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ ಕನ್ನಡದ ಈ ಚೆಲುವೆ. ಮಾಡಿದ್ದು ಬೆರಳಣಿಕೆ ಸಿನಿಮಾಗಳಾದ್ರು ನಟಿಸಿದ ಚಿತ್ರಗಳು ಸೂಪರ್ ಹಿಟ್. ಶಿವಣ್ಣನಿಗೆ ಜೋಡಿಯಾಗಿ ನಟಿಸಿದ ಈಕೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾರೇ ಫಿದಾ ಆಗಿಬಿಟ್ಟರು. ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವಂತೆ ಅಡ್ವಾನ್ಸ್ ಕೂಡ ಬುಕ್ ಮಾಡಿದ್ದರಂತೆ. ಹೌದು, ಇಂದು ಸ್ಯಾಂಡಲ್ ವುಡ್ ನ ಕೆಂಡ ಸಂಪಿಗೆ ಮಾನ್ವಿತಾ ರ ಹುಟ್ಟುಹಬ್ಬ.
ಕೆಂಡ ಸಂಪಿಗೆ ಮೂಲಕ ಸಿನಿ ಆರಂಭಿಸಿದ ಕರಾವಳಿ ಹುಡುಗಿಯ ಕೈತುಂಬಾ ಸದ್ಯ ಅವಕಾಶಗಳಿವೆ. ಇನ್ನು ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಅವರು ತಮ್ಮ ಬತ್ಡೇ ಸೆಲೆಬ್ರೇಷನ್ನನ್ನು ಅಲ್ಲಿಯೇ ಮಾಡಿಕೊಳ್ಳುತ್ತಿದ್ದಾರೆ. ಸದ್ಯ 'ರಾಜಸ್ಥಾನ್ ಡಯರೀಸ್' ಸಿನಿಮಾದ ಸೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಬೇಸಿಗೆಯ ಬಿಸಿಲಿನ ಜೋಧ್ಪುರದ ಜಯಸಲ್ಮೇರ್’ನ ಮರುಭೂಮಿ ಹಾಗೂ ಕೋಟೆಗಳಲ್ಲಿ ಶೂಟಿಂಗ್’ನಲ್ಲಿ ಬ್ಯುಸಿಯಾಗಿದ್ದಾರೆ. 'ದಾರಿ ತಪ್ಪಿದ ಮಗ' ಸಿನಿಮಾದಲ್ಲೂ ಧಿರೇನ್ ರಾಮ್ಕುಮಾರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಮಾನ್ವಿತಾ. ಈ ಚಿತ್ರ ತೆಲುಗಿನ 'ಆರ್ಎಕ್ಸ್ 100' ಚಿತ್ರ ಕನ್ನಡ ರಿಮೇಕ್ ಆಗಿದ್ದು, ಇದರಲ್ಲಿ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಜತೆಗೆ ಮಾನ್ವಿತಾ ಬಾಲಿವುಡ್ ಸಿನಿಮಾದಲ್ಲೂ ಸಹ ನಟಿಸಿಲಿದ್ದಾರಂತೆ.
Comments