‘ಸೈಲೆಂಟ್ ಆಗಿರಬೇಕು, ಇಲ್ದಿದ್ರೆ’ ರಾಕಿಂಗ್ ಸ್ಟಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ಯಾರಿಗೆ..?!!!

ಲೋಕ ಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡಿದ ದಿನದಿಂದಲೂ ಇಲ್ಲಿಯವರೆಗೂ ಜೆಡಿಎಸ್ ನಾಯಕರು ಒಂದಿಲ್ಲೊಂದು ವಿಚಾರಕ್ಕೆ ಟೀಕಾರೋಪಗಳನ್ನು ಎದುರಿಸುತ್ತಿದ್ದಾರೆ. ಸುಮಲತಾ ಅವರನ್ನು ಮಾಯಂಗಿನಿ ಎಂದು ಕರೆದಿದ್ದ ಶಿವರಾಮೇಗೌಡರಿಗೆ ಯಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಪ್ರಚಾರ ಮಾಡತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಕಿಂಗ್ ಸ್ಟಾರ್,ಹಳ್ಳಿ ಕಡೆ ಬಸ್ ಬಂದಾಗ ಮೊದಲು ಕರ್ಚೀಫ್ ಹಾಕಿ ಸಿಟು ಬುಕ್ ಮಾಡಿಕೊಳ್ಳುತ್ತಾರೆ. ಹಾಗೇ ಇಲ್ಲೊಬ್ಬರು ಆರು ತಿಂಗಳಿಗೋಸ್ಕರ ಕರ್ಚೀಫ್ ಹಾಕಿದ್ದರು. ಆ ಕರ್ಚಿಫ್ ಹಾಕಿ ಹೆಣ್ಣು ಮಕ್ಕಳ ಬಗ್ಗೆ ತಪ್ಪಾಗಿ ಮಾತನಾಡಬಾರದು. ಸೈಲೆಂಟ್ ಆಗಿರಬೇಕು. ನೀಟ್ ಆಗಿರಬೇಕು. ಈ ಕರ್ಚಿಫ್ಗಳನ್ನು ಜನರು ಬಳಸಿ ಬಿಸಾಕಿಬಿಡುತ್ತಾರೆ. ಪಾಪ ನೋವಾಗುತ್ತದೆ ಎಂದು ಶಿವರಾಮೇಗೌಡರಿಗೆ ಟಾಂಗ್ ನೀಡಿದರು. ಯಾರು ಏನಾದರೂ ರಾಜಕೀಯ ಮಾಡಿಕೊಳ್ಳಿ ನಮ್ಮನೆ ಹೆಣ್ಣುಮಕ್ಕಳ ತಂಟೆಗೆ ಬರಬೇಡಿ. ನಾವು ತಿರುಗಿ ಮಾತನಾಡಬೇಕಾಗುತ್ತದೆ ಎಂದು ನೇರವಾಗಿ ಶಿವರಾಮೇಗೌಡರಿಗೆ ಯಶ್ 'ಖಡಕ್' ಎಚ್ಚರಿಕೆ ನೀಡಿದರು.
Comments