ತಾಯಿಯಾಗ್ತಿರುವ ಖುಷಿಯಲ್ಲಿ ‘ಕುಲವಧು’ ಸೀರಿಯಲ್ ನಟಿ..?!
ಅಂದಹಾಗೇ ಫೇಮಸ್ ಸೀರಿಯಲ್ ನಟಿಯೊಬ್ಬರು ತಾನು ತಾಯಾಗ್ತಿರುವ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆನ್ ಲೈನ್ ಜಗತ್ತಿನ ಫೇಮಸ್ ಬೆಡಗಿ, ಡ್ಯಾನ್ಸರ್ ದಿಶಾ ತನ್ನ ಇನ್’ಸ್ಟ್ರಾಗ್ರಾಂ ನಲ್ಲಿ ತಮ್ಮ ಸಂತಸವನ್ನು ಬರೆದುಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಅಂದಹಾಗೇ ದಿಶಾ ಮದನ್ ಟಿಕ್ ಟಾಕ್ ಆ್ಯಪ್ ನಲ್ಲಿ ಬಹಳ ಫೇಮಸ್. ನಟನೆಯಿಂದ, ಡ್ಯಾನ್ಸ್ ನಿಂದ ಎಲ್ಲರನ್ನು ಮೋಡಿ ಮಾಡಿರುವ ಇವರು ದೊಡ್ಡ ಅಭಿಮಾನಿ ಬಳಗವನ್ನೇ ಕಟ್ಟಿದ್ದಾರೆ.
ಅಂದಹಾಗೇ ದಿಶಾ ಕೆಲವು ದಿನಗಳ ಹಿಂದಿನಿಂದಲೂ ಯಾವುದೇ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಇದೆ. ತಾನು ಪ್ರಗ್ನೆಂಟ್, ತನ್ನೊಂದಿಗೆ ಸದಾ ಇರುವ ನನ್ನ ಫ್ಯಾಮಿಲಿಗೆ ಬಿಗ್ ಥ್ಯಾಂಕ್ಸ್. ಮತ್ತು ನನ್ನ ಪತಿ ಶಶಾಂಕ್ ಹಾಗೂ ನಾನು ನಮ್ಮ ಪುಟ್ಟ ಕಂದಮ್ಮನನ್ನು ಆಗಸ್ಟ್ ತಿಂಗಳಲ್ಲಿ ಬರ ಮಾಡಿಕೊಳ್ಳುತ್ತಿದ್ದೇವೆ ಎಂದು ತಮ್ಮ ಇನ್ಸ್ಸ್ಟ್ರಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ 'ಕುಲವಧು' ಧಾರಾವಾಹಿ ಮೂಲಕ ಚಿರಪರಿಚಿತವಾದ ದಿಶಾ, ಅಂದಹಾಗೇ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೇಟ್ ಯೂ ರೋಮಿಯೋ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
Comments