ಹಿಗ್ಗಾ-ಮುಗ್ಗಾ ಬೈಸಿಕೊಂಡ 'ನಟ ಸಾರ್ವಭೌಮ' ಹೀರೋಯಿನ್ : ಮಲಯಾಳಿ ಸುಂದರಿ ಮಾಡಿದ ತಪ್ಪಾದ್ರು ಏನು..?!!!
ನಟ ಸಾರ್ವ ಭೌಮ ಸಿನಿಮಾ ನೋಡಿ ಆಕೆಯೇ ಪುನೀತ್ ಅವರ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗ ಬೇಕು ಎಂದು ಪವರ್ ಸ್ಟಾರ್ ಅಭಿಮಾನಿಗಳು ಮನವಿ ಮಾಡಿಕೊಂಡರು. ಪರಭಾಷೆಯಿಂದ ಬಂದ ಆ ನಾಯಕಿಗೆ ಕನ್ನಡದ ಅಭಿಮಾನಿಗಳು ಫಿದಾ ಆದ್ರು. ಆಕೆಯ ಸೌಂದರ್ಯ, ನಟನೆಗೆ ದಿಲ್ ಖುಷ್ ಆದ್ರು. ಹೌದು ಆದರೆ ಇದೀಗ ಆ ಸುಂದರಿ ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ಟ್ರೊಲಿಗರ ಬಾಯಿಗೆ ಅಹಾರವಾಗಿದ್ದಾಳೆ. ಆಕೆಯೇ ಅವಳೇ ಅನುಪಮ ಪರಮೇಶ್ವರ್.
ಅನುಪಮಾ ಪರಮೇಶ್ವರ್, ಮುದ್ದು ಮುಖದ ಚೆಲುವೆ, ಮೊದಲ ನೋಡದಲ್ಲೇ ಥಟ್ ಅಂತಾ ಇಷ್ಟವಾಗೋ ಮದನಾರಿ, ಗಂಡ್ ಹೈಕ್ಳ ಪಾಲಿನ ಕನಸಿನ ದೇವತೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಸಾಕಷ್ಟು ನಿರ್ದೇಶಕರು ಅನುಪಮಾ ಕಾಲ್ಶೀಟ್ ಹಿಡಿದು ನಮ್ಮ ಚಿತ್ರದಲ್ಲಿ ಒಮ್ಮೆ ಆ್ಯಕ್ಟ್ ಮಾಡಿ ಅಂತಾ ದುಂಬಾಲು ಬೀಳ್ತಿದ್ದಾರೆ. ಮಲಯಳಿ ಚೆಲುವೆ ಅನುಪಮಾಗೆ ಇದೀಗ ಕೇರಳಿಗರು ಹಿಗ್ಗಾ-ಮುಗ್ಗಾ ಬೈಯ್ದಿದ್ದಾರೆ.ತನ್ನ ತಪ್ಪು ಇಲ್ದೇ ಇದ್ರು, ಆಕೆ ಕೇರಳಿಗರ ಕೆಂಙಗಣ್ಣಿಗೆ ಗುರಿಯಾಗಿದ್ದಾಳೆ. ಯಾಕೆ ಗೊತ್ತಾ…? ಕೇರಳದ ಬಿಜೆಪಿ ಕ್ಯಾಂಡಿಡೇಟ್ ಸುರೇಶ್ ಗೋಪಿ ಶಬರಿ ಮಲೆ ಅಯ್ಯಪ್ಪನ ಹೆಸ್ರಲ್ಲಿ ಮತ ಯಾಚಿಸ್ತಾ ಇದ್ರು. ಹೀಗಾಗಿ ಅಲ್ಲಿನ ಡಿಸಿ ಟಿ.ವಿ. ಅನುಪಮಾ ಬಿಜೆಪಿ ಅಭ್ಯರ್ಥಿಗೆ ಶೋಕಸ್ ನೋಟಿಸ್ ಕೊಟ್ಟಿದ್ದಾರೆ. ಆದರೆ ಅಸಲಿಗೆ ಆ ಅನುಪಮಾ ಯಾರು ಅಂತಾ ತಿಳಿದುಕೊಳ್ಳದೇ ಸುರೇಶ್ ಗೋಪಿ ಅಭಿಮಾನಿಗಳು ನಟಿ ಅನುಪಮಾ ಪರಮೇಶ್ವರನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡತೊಡಗಿದ್ದಾರೆ.
ಕೆಟ್ಟದಾಗಿ ಕಮೆಂಟ್ ಮಾಡುವುದು, ಅಶ್ಲೀಲ ಪದ ಬಳಕೆ ಮಾಡುವುದು ಮಾಡಿದ್ದಾರೆ. ಸುರೇಶ್ ಬೆಂಬಲಿಗರು ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ನಟಿ ಅನುಪಮಾ ಪರಮೇಶ್ವರನ್ ಫೇಸ್ಬುಕ್ನಲ್ಲಿ ಕೆಟ್ಟದಾಗಿ ಟ್ರೋಲ್, ಕಮೆಂಟ್ ಮಾಡೋದಿಕ್ಕೆ ಶುರುಮಾಡಿದ್ದಾರೆ. ಜನ ಯಾಕಿಂಗೆ ಕಮೆಂಟ್ ಮಾಡ್ತಿದ್ದಾರೆ ಅಂತ ಅರ್ಥ ಆಗೋಕಜೆ ನಟಿ ಅನುಪಮಗೆ ಒಂದಿಷ್ಟು ಹೊತ್ತು ಬೇಕಾಯ್ತಂತೆ.ಆದರೆ ಹೆಸರಿನ ಎಡವಟ್ಟಿನಿಂದಾಗಿ ಈ ಎಲ್ಲಾ ತಪ್ಪು ನಡೆದು ಹೋಗಿದೆ. ಆದರೆ, ಇದರಿಂದ ಕಿರಿಕಿರಿ, ಮುಜುಗರ ಅನುಭವಿಸಿದ್ದೂ ಮಾತ್ರ ನಟಿ ಅನುಪಮಾ ಪರಮೇಶ್ವರನ್.
Comments