'ತಿಥಿ' ಖ್ಯಾತಿಯ ಗಡ್ಡಪ್ಪ ಮಂಡ್ಯದಲ್ಲಿ ಕ್ಯಾಂಪೇನ್ : ಯಾರ ಪರ ಗೊತ್ತಾ..?!!!
ಅಂದಹಾಗೇ ಚುನಾವಣೆ ಕಾವು ಜೋರಾಗುತ್ತಿದ್ದಂತೇ ಸ್ಯಾಂಡಲ್ ವುಡ್ ನ ಕೆಲ ಸ್ಟಾರ್ ಗಳು ಬಹಿರಂಗವಾಗಿ ಸಪೋರ್ಟ್ ಮಾಡ್ತಿವಿ ಎಂದಿದ್ದರೇ, ಮತ್ತೆ ಕೆಲವರು ತೆರೆ ಮರೆಯಲ್ಲಿ ಬೆಂಬಲ ಸೂಚಿಸ್ತಾ ಇದ್ದಾರೆ. ಇದೀಗ ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರ ಸ್ವಾಮಿ ಕೆಲವರು ಅಖಾಡಕ್ಕೆ ಇಳಿದು ಪ್ರಚಾರ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಮಿಂಚಿದ ಸ್ಟಾರ್ ತಿಥಿ ಖ್ಯಾತಿಯ ಗಡ್ಡಪ್ಪ ಅವರು ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವ ಸ್ಪರ್ಧಿ ಪರ ಮತ ಮಾಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಸುಮಲತಾ ಅಂಬರೀಶ್ ಪರ ದರ್ಶನ್ ಮತ್ತು ಯಶ್ ಅವರು ಪ್ರಚಾರ ಮಾಡುತ್ತಿದ್ದಾರೆ ಇದೀಗ ಅವರಿಗೆ ಸಾಥ್ ಕೊಡುವಂತೆ ಗಡ್ಡಪ್ಪ ಕೂಡ ಅಂಬರೀಶ್ ಗೆ ಮತ ಹಾಕುವಂತೆ ಸುಮಲತಾಗೆ ಸಪೋರ್ಟ್ ಮಾಡಿದ್ದಾರೆಮಂಡ್ಯ ಲೋಕಸಭಾ ಕ್ಷೇತ್ರದ ನೊದೆಕೊಪ್ಪಲು ಗ್ರಾಮದಲ್ಲಿ ಪ್ರಚಾರ ಮಾಡುತ್ತಿರುವ ದರ್ಶನ್, ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಮನೆಗೆ ಹೋಗಿ ಸುಮಲತಾ ಅಂಬರೀಶ್ ಗೆ ಮತ ನೀಡುವಂತೆ ಮನವಿ ಮಾಡಿದ್ದರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಡಪ್ಪ, ದರ್ಶನ್ ಬಂದು ಸುಮಲತಾ ಅವರಿಗೆ ಮತ ಹಾಕಿ ಎಂದರು. ನಾನು ಎಲ್ಲರಿಗೂ ಸುಮಲತಾ ಅವರಿಗೆ ಮತ ಹಾಕಿ ಎಂದು ಮನವಿ ಮಾಡುತ್ತೇನೆ. ಅಂಬರೀಶ್ ಅವರು ಮಂಡ್ಯದ ಗಂಡು, ಅವರ ಪತ್ನಿಗೇ ಮತ ಹಾಕಿ, ನಾನು ಕೂಡ ಅವರ ಪರವೇ ಪ್ರಚಾರ ಮಾಡುತ್ತಿದ್ದೇನೆ ಎಂದರು.
Comments