ಪ್ರಚಾರದ ನಡುವೆಯೂ ಆ ವ್ಯಕ್ತಿಯನ್ನು ನೆನೆದ ಚಾಲೆಂಜಿಂಗ್ ಸ್ಟಾರ್….!
ಚಾಲೆಂಜಿಂಗ್ ಸ್ಟಾರ್ ಮಂಡ್ಯದ ರಣ ಬಿಸಿಲಿನಲ್ಲೂ ಕ್ಯಾಂಪೇನ್ ಅಬ್ಬರವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ. ಹೋದ ಕಡೆ ಎಳನೀರು ಕುಡಿದು, ಒಂದೆರಡು ಡೈಲಾಗ್ ಹೇಳುವುದರ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಸುಮಲತಾಗೆ ಓಟ್ ಕೇಳುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಲೆಕ್ಷನ್ ಹತ್ತಿರ ಬರುತ್ತಿದೆ. ಇಬ್ಬರ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ.
ಗೆಲುವು ಯಾರ ಪರ ಒಲಿಯುತ್ತೋ ಗೊತ್ತಿಲ್ಲ. ಆದರೆ ಸ್ಟಾರ್ ಕ್ಯಾಂಪೇನ್ ಮಾತ್ರ ಮಂಡ್ಯದಲ್ಲಿ ಜೋರಾಗುತ್ತಿದೆ. ಈ ಪ್ರಚಾರದ ನಡುವೆಯೂ ಮುಖ್ಯವಾದ ವ್ಯಕ್ತಿಯನ್ನು ನೆನೆದಿದ್ದಾರೆ ಸ್ಯಾಂಡಲ್ ವುಡ್' ದಾಸ.ಒಂದು ಕಡೆ ಸಿನಿಮಾ ಶೆಡ್ಯೂಲ್ ಗೆ ರಜಾ ಹಾಕಿ , ಸುಮಲತಾರನ್ನು ಈ ಬಾರಿ ಗೆಲ್ಸಿಯೇ ತೀರಬೇಕು ಎಂದು ಪಣತೊಟ್ಟಿರುವ ದರ್ಶನ್ ಬಿಡುವಿಲ್ಲದ ವೇಳೆ ಈ ವ್ಯಕ್ತಿಯನ್ನು ನೆನಪಿಸಿಕೊಂಡಿದ್ದಾರೆ. ಡಾ ರಾಜ್ ಅವರ 13 ನೇ ಪುಣ್ಯ ಸ್ಮರಣೆ ನಿನ್ನೆಯಷ್ಟೇ ನಡೆದಿದೆ. ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ನೆರವಾದ ಅಣ್ಣಾವ್ರ ಪುಣ್ಯ ತಿಥಿ ಇಂದು. ಸದಾ ನಮ್ಮೊಂದಿಗೆ ಡಾ|| ರಾಜ್” ಎಂದು ರಾಜ್‍ಕುಮಾರ್ ಅವರ ಫೋಟೋ ಹಾಕಿಕೊಂಡಿದ್ದಾರೆ.ಪುಣ್ಯ ಸ್ಮರಣೆ ಅಂಗವಾಗಿ ರಾಜ್ ಕುಟುಂಬಸ್ಥರು, ಅಭಿಮಾನಿಗಳು ಅವರ ಸಮಾಧಿ ಬಳಿ ಪೂಜೆ ಸಲ್ಲಿಸಿದ್ದಾರೆ.
Comments