ಕೊನೆಗೂ ಬದುಕಿ ಬಂದ ಸಾಹಸಸಿಂಹ : ವಿಷ್ಣು ಅಭಿಮಾನಿಗಳಲ್ಲಿ ಸಂತಸ...!!!

ವಿಷ್ಣು ಮತ್ತು ಅಂಬಿ ಸ್ಯಾಂಡಲ್’ವುಡ್ ಕುಚುಕುಗಳು. ಸದ್ಯ ವಿಷ್ಣು ಸ್ಮಾರಕಕ್ಕೆ ಇದ್ದ ಅಡ್ಡಿ-ಆತಂಕಗಳು ದೂರವಾದವು. ಒಂದು ಕಡೆ ಅಂಬಿ ಪತ್ನಿ ಎಲೆಕ್ಷನ್ ಬ್ಯುಸಿಯಲ್ಲಿದ್ದರೆ, ಇತ್ತ ವಿಷ್ಣು ಪತ್ನಿ ತಮ್ಮ ಪತಿ ಸ್ಮಾರಕದ ನಿರ್ಮಾಣ ಕುರಿತಾದ ವಿಚಾರಕ್ಕೆ ಓಡಾಡುತ್ತಿದ್ದರು.ಲೋಕ ಸಭೆ ಚುನಾವಣೆ ಹಿನ್ನಲೆಯಲ್ಲಿ ಬಗೆ ಹರಿಯದೇ ಇದ್ದ ವಿಷ್ಣು ಸ್ಮಾರಕಕ್ಕೆ ಕೊನೆಗೂ ಜೀವ ಬಂದಿದೆ. ವಿಷ್ಣು ಮತ್ತೆ ಹುಟ್ಟಿ ಬಂದಿದ್ದಾರೆಂದು, ಅಭಿಮಾನಿಗಳು ಸಂತಸ ಆಚರಿಸುತ್ತಿದ್ದಾರೆ.
ವಿಷ್ಣು ಫ್ಯಾಮಿಲಿ ಮತ್ತು ಅಭಿಮಾನಿಗಳ ಬಹುದಿನಗಳ ಕನಸು ನನಸಾದಂತಿದೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ, ಅಧೀನ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ. ವಿಷ್ಣು ಸ್ಮಾರಕ್ಕೆ ಗೊತ್ತು ಮಾಡಿದ್ದ ಜಮೀನಿನ ಬಗ್ಗೆ ಮಹದೇವಮ್ಮ ಎಂಬುವವರು ತಮ್ಮ ಜನೀನು ಎಂದು ಅರ್ಜಿ ಸಲ್ಲಿಸಿದ್ದರು. ಸ್ಮಾರಕ ನಿರ್ಮಾಣಕ್ಕೆ ಅಡ್ಡಿ ಪಡಿಸಿದ್ದರು.ವಿಚಾರಣೆ ನಡೆಸಿದ್ದ ಮೈಸೂರಿನ ಸಿವಿಲ್ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಹಿಂದೆ ಆದೇಶಿಸಿತ್ತು.ಆದ್ರೆ ಈಗ ಹೈಕೋರ್ಟ್ ಮಧ್ಯಂತರ ಆದೇಶವನ್ನು ಹಿಂಪಡೆದಿದೆ. ಸದ್ಯದಲ್ಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿದೆ.
Comments