ವೈಫ್ ವಾಯ್ಸ್ ಗೆ ಫಿದಾ ಆದ ಚಿರಂಜೀವಿ ಸರ್ಜಾ..!!
ನಮ್ಮ ಸ್ಯಾಂಡಲ್ ವುಡ್ ನ ನಾಯಕ ನಾಯಕಿರು ಎಲ್ಲದಕ್ಕೂ ಸೈ ಎನ್ನುವ ರೀತಿಯಲ್ಲಿಯೇ ಇರುತ್ತಾರೆ.. ನಟನೆಗೂ ಸೈ, ಹಾಡೋದಕ್ಕೂ ಸೈ, ಕುಣಿಯೋದಕ್ಕೂ ಸೈ, ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ ಎಲ್ಲವನ್ನು ಕೂಡ ಟ್ರೈ ಮಾಡುತ್ತಿರುತ್ತಾರೆ. ಇತ್ತಿಚಿಗಷ್ಟೆ ಸಪ್ತಪದಿ ತುಳಿದ ಮೇಘನಾ ರಾಜ್ ಕೂಡ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಚಿರು ಸರ್ಜಾ ಅಭಿನಯದ ಸಿಂಗ ಸಿನಿಮಾದ ಹಾಡೊಂದನ್ನು ಹಾಡಿದ್ದ ಮೇಘನಾ ರಾಜ್ ಗೆ ಇದೀಗ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪತ್ನಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಫುಲ್ ಖುಷ್ ಆಗಿದ್ದಾರೆ.ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಗೂ ಮೇಘನಾ ರಾಜ್ ಹಾಡಿರುವ 'ವಾಟ್ ಎ ಬ್ಯೂಟಿಫುಲ್' ಎಂಬ ಹಾಡು ಇದಾಗಿದ್ದು, ಈಗಾಗಲೇ ಯೂ ಟ್ಯೂಬ್ ನಲ್ಲಿ 1 ಮಿಲಿಯನ್ ವ್ಯೂ ಪಡೆದಿದೆ. ಇದೊಂದು ಮಾಸ್ ಹಾಡು ಆಗಿದ್ದು, ಅಭಿಮಾನಿಗಳಿಂದ ಪತ್ನಿ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಖುಷಿಯಿಂದಲೇ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಮೇಘನಾ ಹಾಡಿಗೆ ನಟ ಶ್ರೀಮುರಳಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ಇದೇ ಸಿನಿಮಾದ ಶ್ಯಾನೆ ಟಾಪಾಗೌಳ್ಳೆ ಸಾಂಗ್ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿದೆ.. ಚಿರು ಗೆ ಈ ಸಿನಿಮಾ ಸ್ಯಾಂಡಲ್ ವುಡ್ನಲ್ಲಿ ಒಂದೊಳ್ಳೆ ಬ್ರೇಕ್ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
Comments