ಶ್ರದ್ಧಾ ಶ್ರೀನಾಥ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ ಈ ಖ್ಯಾತ ನಟನ ಮಗ..!!
ಸ್ಯಾಂಡಲ್ ವುಡ್ ನನ್ನು ಒಂದು ಕಾಲದಲ್ಲಿ ಆಳಿದ ನಟರಲ್ಲಿ ಸಾಯಿ ಕುಮಾರ್ ಕೂಡ ಒಬ್ಬರು.. ಖಡಕ್ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡರು.. ಕೊಟ್ಟಂತಹ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್,.. ಮಾಸ್ ಡೈಲಾಗ್ ಹೇಳುದ್ರೆ ಸಾಕು ಥಿಯೇಟರ್ ನಲ್ಲಿ ಅಭಿಮಾನಿಗಳು ವಿಷಲ್ ಹೊಡೆಯುತ್ತಾ ಸಿನಿಮಾ ನೋಡುತ್ತಿದ್ದರು..ಇದೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರ ಶ್ರದ್ಧಾ ಶ್ರೀನಾಥ್ ಜೊತೆ ರೋಮ್ಯಾನ್ಸ್ ಮಾಡಲು ಹೊರಟಿದ್ದಾರೆ.
ಎಸ್.. ಬಹುಭಾಷಾ ನಟ ಸಾಯಿಕುಮಾರ್ ಪುತ್ರ ಆದಿ ನಾಯಕರಾಗಿ ನಟಿಸುತ್ತಿರುವ 'ಜೋಡಿ' ಚಿತ್ರದಲ್ಲಿ ಬಹುಭಾಷಾ ನಟಿ ಶ್ರದ್ದಾ ಶ್ರೀನಾಥ್ ಜೊತೆಯಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಛಾಪು ಮೂಡಿಸುತ್ತಿರುವ ನಟಿ ಶ್ರದ್ದಾ ಶ್ರೀನಾಥ್ ತೆಲುಗು ಚಿತ್ರ 'ಜೋಡಿ'ಯಲ್ಲಿ ಆದಿ ಅವರೊಂದಿಗೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದು ತೆಲುಗು ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ನಿರ್ದೇಶಕ ವಿಶ್ವನಾಥ್ 'ಜೋಡಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ತಮಿಳಿನಲ್ಲಿ ಅಜಿತ್, ತೆಲುಗಿನಲ್ಲಿ ನಾನಿ ಜೊತೆಗೆ ಅಭಿನಯಿಸಿರುವ ಶ್ರದ್ಧಾ ಶ್ರೀನಾಥ್ ಹಿಂದಿ, ಮಲಯಾಳಂನಲ್ಲಿಯೂ ಕೂಡ ಗಮನ ಸೆಳೆದಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ'ನಲ್ಲಿ ಕಾಣಿಸಿಕೊಂಡಿರುವ ಅವರು, ಸಾಯಿ ಕುಮಾರ್ ಆದಿ ಅವರೊಂದಿಗೆ 'ಜೋಡಿ' ಚಿತ್ರದಲ್ಲಿಯೂ ತೆರೆ ಮೇಲೆ ಮಿಂಚಲಿದ್ದಾರೆ. ಒಟ್ಟಾರೆಯಾಗಿ ಸಾಯಿ ಕುಮಾರ್ ಮಗನೂ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.. ಸ್ಯಾಂಡಲ್'ವುಡ್ ನಲ್ಲಿ ಭರವಸೆಯ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments