ಅಪ್ಪನ ನೆನೆದು ಭಾವುಕರಾದ್ರು ಅಪ್ಪು : ಆ ದಿನಗಳನ್ನು ನೆನಪಿಸಿಕೊಂಡ ಪವರ್ ಸ್ಟಾರ್…!

ಡಾ. ರಾಜ್ ಅವರ 13 ನೇ ವರ್ಷದ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಪ್ಪಾಜಿಯನ್ನು ನೆನೆದು ಭಾವುಕರಾದ್ರು ಅಪ್ಪಾಜಿಯನ್ನು ಕಣ್ತುಂಬಿಕೊಂಡು ಹೇಳಿದ್ದೇನು ಗೊತ್ತಾ..? ನನಗೆ ನಮ್ಮ ಅಪ್ಪಾಜಿ ಒಳ್ಳೆಯ ಜೀವನವನ್ನುಕೊಟ್ಟಿದ್ದಾರೆ. ನಮ್ಮ ಅಪ್ಪಾಜಿ ಕಲರ್ ಬಟ್ಟೆ ಧರಿಸಿದ್ದೇ ನನಗೆ ಗೊತ್ತಿಲ್ಲ. ಅಂಗಿ ಅಂದ್ರೆ ನನಗೆ ನೆನಪಾಗೋದು ಅಪ್ಪಾಜಿ ಧರಿಸುತ್ತಿದ್ದ ಬಿಳಿ ಅಂಗಿ. ಅಪ್ಪ ಬಿಳಿ ಬಣ್ಣದ ಅಂಗಿ ಬಿಟ್ಟರೇ ಬೇರೆ ಬಣ್ಣದ ಂಗಿ ಧರಿಸುತ್ತಿಲ್ಲ. ನಾನು ಅಪ್ಪಾಜಿಗೆ ಎಂದು ಕೂಡ ಬಟ್ಟೆ ಗಿಫ್ಟ್ ಮಾಡಿಲ್ಲ.
ನಾನು ಅವರಿಗೆ ಶೂ, ಟಿವಿ, ಸೋಫಾ ವನ್ನು ಮಾತ್ರ ಗಿಫ್ಟ್ ಮಾಡುತ್ತಿದ್ದೆ. ಅವರಿಗೆ ಬೆಲೆ ಬಾಳುವ ಗಿಫ್ಟ್ ಕೊಟ್ಟರೇ ಬಳಸುತ್ತಿರಲಿಲ್ಲ. ಅದಕ್ಕೆ ಕಡಿಮೆ ಬೆಲೆಯ ಗಿಫ್ಟ್ ಗಳನ್ನು ಮಾತ್ರ ಕೊಡುತ್ತಿದ್ದೆ. ಅದಕ್ಕೆ ಬೆಲೆ ಕಡಿಮೆ ಮಾಡಲು ಪ್ರೈಸ್ ಟ್ಯಾಗ್‍ನಲ್ಲಿ ಒಂದು ಝೀರೊ ಅಳಿಸಿ ಕೊಡುತ್ತಿದ್ದೆ ಎಂದು ತಂದೆಯ ನೆನಪನ್ನು ಹಂಚಿಕೊಂಡರು. ಅಂದಹಾಗೇ ನಾನು ಮತ್ತು ಶಿವಣ್ಣ, ರಾಘಣ್ಣ ಯಾವುದಾದರು ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೀವಿ. ಸಾಧ್ಯವಾದರೇ ಒಳ್ಳೆ ಸ್ಕ್ರಿಪ್ಟ್ ಬಂದ್ರೆ ಖಂಡಿತಾ ಸಿನಿಮಾ ಮಾಡ್ತೀವಿ ಎಂದಿದ್ದಾರೆ. ಅಮ್ಮನಿಗೆ ಮೊದಲು ನಮಸ್ಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ತಾಯಿ ಮೊದಲು ಅದೇ ದಾರಿಯಲ್ಲಿ ಬಂದೆ ಅದಕ್ಕೆ ಮೊದಲು ಅವರಿಗೆ ನಮಸ್ಕಾರ ಮಾಡಿದೆ ಅಷ್ಟೇ ಎಂದರು. ನಾನು ಕಪ್ಪು ಬಣ್ಣದ ಬಟ್ಟೆ ಜಾಸ್ತಿ ಹಾಕುತ್ತೇನೆ ಅಂತ ಅಪ್ಪ, ಅಮ್ಮ ಹೇಳ್ತಾ ಇದ್ದರು. ಆದ್ರೆ ಅವರಿಗೆ ಇಷ್ಟ ಅಂತಲೇ ಇಂದು ವೈಟ್ ಹಾಕಿದ್ದೇನೆ ಎಂದು ತಂದೆ ತಾಯಿಯನ್ನು ಪುನೀತ್ ನೆನಪಿಸಿಕೊಂಡರು.
Comments