ಇಂದು 13ನೇ ವರ್ಷದ ರಾಜ್ ಪುಣ್ಯ ತಿಥಿ : ಸ್ಮಾರಕದ ಬಳಿ ಹರಿದುಬಂದ ಜನಸಾಗರ...
ಡಾ. ರಾಜ್ ಅವರ ಅಗಲಿ ಇಂದಿಗೆ 13 ವರ್ಷ. ಇಂದು ಡಾ. ರಾಜ್ ಅವರ ಪುಣ್ಯ ತಿಥಿ. ಕುಟುಂದವರು, ರಾಜ್ ಅಭಿಮಾನಿಗಳು ಕಂಠಿರವದಲ್ಲಿರುವ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ರಾಜ್ ಮತ್ತು ಪಾರ್ವತಮ್ಮ ಸಮಾಧಿಯನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಸಾವಿರಾರು ಅಭಿಮಾನಿಗಳು ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಬರುತ್ತಿದ್ದಾರೆ. ಸ್ಮಾರಕಕ್ಕೆ ನಮನ ಸಲ್ಲಿಸಲು ಬರುವ ಅಭಿಮಾನಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗಿದೆ.
ಅಪ್ಪಾಜಿ ಪುಣ್ಯತಿಥಿ ಅಂಗವಾಗಿ ಪಿಆರ್’ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಕವಲುದಾರಿ ಸಿನಿಮಾ ಬಿಡುಗಡೆ ಮಾಡಲಾಗಿದೆ.ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅ್ಮನ ಮನೆ ಸಿನಿಮಾವನ್ನು ಅಮ್ಮನಿಗೆ ಅರ್ಪಿಸಿದೆ. ಈ ಬಾರಿ ಅಪ್ಪನ ಅಂಗಿ ಸಿನಿಮಾವನ್ನು ಅಪ್ಪಾಜಿಗೆ ಅರ್ಪಿಸುತ್ತಿದ್ದೆನೆ ಎಂದಿದ್ದಾರೆ. ಏಫ್ರಿಲ್ ತಿಂಗಳು ಬಂದರೆ ಸಾಕು ರಾಜ್ ಮಾಸ ಬಂದಂತರೆ ಅರಿವಾಗುತ್ತದೆ ಎಂದಿದ್ದಾರೆ. ಅಪ್ಪನ ಆಶೀರ್ವಾದದಿಂದ ನಾನು ಮತ್ತೆ ಸಿನಿಮಾ ಮಾಡುವಂತಾಗಿದ್ದೇನೆ ಎಂದಿದ್ದಾರೆ. ಅಪ್ಪಾಜಿ ಪುಣ್ಯತಿಥಿ ಅಂಗವಾಗಿ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಕವಲುದಾರಿ ಸಿನಿಮಾ ಬಿಡುಗಡೆ ಮಾಡಲಾಗಿದೆ. ನಾನು ಸಿನಿಮಾದಿಂದಲೇ ದೂರವಾಗಿ ಬಿಟ್ಟಿದ್ದೆ.
Comments