'ನಟಿ ಆದ್ರೆ ಏನಂತೆ ತಪ್ಪು ತಪ್ಪೇ'...? ಸೋಶಿಯಲ್ ಮಿಡಿಯಾ ಮೂಲಕವೇ ಸಾರಾ ಮೇಲೆ ಕೇಸ್..?
ನಟಿ ಸಾರಾ ಅಲಿಖಾನ್ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಶಾರುಖ್ ಖಾನ್ ಅವರನ್ನು ಅಂಕಲ್ ಎಂದು ಕರೆದು ಕಿಂಗ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಸಾರಾ ತನ್ನ ಚಿಕ್ಕಮ್ಮ ಕರಿನಾ ಕಪೂರ್'ಳಿಂದ ಸಲಹೆ ಗಳನ್ನು ಪಡೆಯುತ್ತಿದ್ದರು ಕೆಲವು ಬಾರಿ ಎಡುವುತ್ತಲೇ ಇರುತ್ತಾರೆ. ಈ ಬಾರಿ ತಮ್ಮ ಮೇಲೆ ಕೇಸ್ ಬೀಳುವ ಹಾಗೇ ತಾನೇ ನಡೆದುಕೊಂಡಿದ್ದಾಳೆ. ಆಕೆಯ ಮಾಡಿದ ಕೆಲಸ ವೈರಲ್ ಆಗಿದ್ದು ಟ್ರೋಲಿಗರ ಬಾಯಿಗೆ ಮತ್ತೊಮ್ಮೆ ಆಹಾರವಾಗಿದ್ದಾಳೆ.
ಸಾರಾ ಒಬ್ಬ ನಟಿ, ನಟಿಯಾಗಿದ್ದುಕೊಂಡೇ ತಪ್ಪು ಮಾಡಬಹುದಾ..? ನಮ್ಮ ಹಾಗೇ ಆಕೆಯೂ ಈ ದೇಶದ ಪ್ರಜೆ. ಆಕೆಯ ಮೇಲೂ ಕೇಸ್ ಬೀಳಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು 'ನಟಿ ಆದ್ರೆ ಏನು..? ತಪ್ಪು ತಪ್ಪೇ'. ಎಂದಿದ್ದಾರೆ. ಅಂದಹಾಗೇ ಸಾರಾ ಅಲಿಖಾನ್ ಮಾಡಿದ ತಪ್ಪಾದ್ರು ಏನು ಗೊತ್ತಾ..?ಸಾರಾ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಹಿಂಬದಿ ಕೂತು ರಸ್ತೆ ರಸ್ತೆಗಳಲ್ಲಿ ಸುತ್ತಾಡುತ್ತಿದ್ದುದ್ದಕ್ಕೆ ಇದೀಗ ಆಕೆಯ ಮೇಲೆ ದೂರು ದಾಖಲಾಗಿದೆ. ಕಿರು ಚಿತ್ರದ ಶೂಟಿಂಗ್ ವೇಳೆ ಸಹ ನಟ ಕಾರ್ತಿಕ್ ಆರ್ಯನ್ ಜೊತೆಬೈಕ್ ನಲ್ಲಿ ಸಾರಾ ದೆಹಲಿಯ ರೋಡ್ ಗಳಲ್ಲಿಹೆಲ್ಮೆಟ್ ಇಲ್ಲದೇ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ಮೂಲಕವೇ ದೂರು ದಾಖಲಾಗಿದೆ.
Comments