ವಿವಾಹ ವಾರ್ಷಿಕೋತ್ಸವಕ್ಕೆ ಮಗಳಿಂದ ಸಿಕ್ತು ಭರ್ಜರಿ ಸರ್ಪ್ರೈಸ್ : ಗಿಫ್ಟ್ ನೋಡಿ ಕಣ್ತುಂಬಿಕೊಂಡ್ರಂತೆ ಮಾಜಿ ಸೆಕ್ಸಿ ತಾರೆ !!!
ಹಾಟ್ ಬೆಡಗಿ ಸನ್ನಿ ಲಿಯೋನ್ ಸದ್ಯ ತಮ್ಮ 8 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಪತಿ ಡೇನಿಯಲ್ ಜೊತೆ ಕಳೆದ ಸುಮಧುರ ಕ್ಷಣವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೇ ಪೋಸ್ಟ್ ಮಾಡಿದ ಆ ಫೋಟೋಗೆ ಅಭಿಮಾನಿಗಳಿಂದ ಭರಪೂರ ಲೈಕ್ಸ್ ಕೂಡ ಬಂತು.
ಇನ್ನು ಸನ್ನಿ ವಿವಾಹ ವಾರ್ಷಿಕೋತ್ಸವಕ್ಕೆ ಪ್ರೀತಿಯ ಮಗಳು ನಿಶಾ ಏನ್ ಸರ್ಪ್ರೈಸ್ ಕೊಟ್ಟಿದ್ದಾಳೆ ಗೊತ್ತಾ..? ಆ ಸರ್ಪ್ರೈಸ್ ಗಿಫ್ಟ್ ನೋಡುತ್ತಾ ಸನ್ನಿಗೆ ಕಣ್ತುಂಬಿ ಬಂತಂತೆ. ತಾಯಿ ವಿವಾಹ ಸಂಭ್ರಮಕ್ಕೆ ಇನ್ನಷ್ಟು ಖುಷಿ ನೀಡುವಂತೆ ಆಕೆಯ ದತ್ತು ಪುತ್ರಿ ನಿಶಾ ವಿಶೇಷವಾದ ಕೇಕ್ವೊಂದನ್ನು ಸಿದ್ಧಪಡಿಸಿದ್ದು, ಅದನ್ನು ಸಪ್ರೈಸ್ ಆಗಿ ತಾಯಿ-ತಂದೆಯ ಮುಂದಿಟ್ಟು ವಿಶ್ ಮಾಡಿದಳಂತೆ. ಈ ವಿಚಾರವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಸನ್ನಿ ಲಿಯೋನ್ ಸೆಕ್ಸಿ ತಾರೆಯಾಗಿ ಮಿಂಚಿದ್ರೂ ಅವರೊಬ್ಬ ಭಾವುಕ ಜೀವಿ ಎಂಬುದನ್ನುಅನೇಕ ಬಾರೀ ಸಾಭೀತು ಪಡಿಸಿದ್ದಾರೆ. ಒಟ್ಟಿನಲ್ಲಿ ತನ್ನ ಸುತ್ತಲಿನ ಖುಷಿಯನ್ನೇ ತನ್ನ ಖುಷಿಯೆಂದು ಭಾವಿಸುವ ಸನ್ನಿ ತಮ್ಮ ಇನ್ಸ್ ಟ್ರಾಗ್ರಾಂ ನಲ್ಲಿ ಸಂಭ್ರಮದ ಬಗ್ಗೆ ಬರೆದುಕೊಂಡಿದ್ದಾರೆ.
‘ವಿವಾಹ ವಾರ್ಷಿಕೋತ್ಸದ ಶುಭಾಶಯಗಳು ಡೇನಿಯಲ್. ನೀನು ನನ್ನ ಜೀವನದ ಅವಿಭಾಜ್ಯ ಅಂಗ. ನನ್ನ ಆತ್ಮೀಯ ಗೆಳೆಯ ಹಾಗೂ ನಮ್ಮ ಮಕ್ಕಳಿಗೆ ಅತ್ಯುತ್ತಮ ತಂದೆ. ಹಾಗೆಯೇ ಈ ಬಾರಿಯ ಖುಷಿಯ ವಿಚಾರವೆನೆಂದರೆ ನಮ್ಮ ಮಗಳು ನಮಗಾಗಿ ಈ ಕೇಕ್ ತಯಾರಿಸಿದ್ದಾಳೆ’ ಎಂದು ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. 2017 ರಲ್ಲಿ ಸನ್ನಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ದಂಪತಿಗೆ ಇಬ್ಬರು ಅವಳಿ ಗಂಡು ಮಕ್ಕಳು ಕೂಡ ಇದ್ಧಾರೆ.
Comments