ಗೋಲ್ಡನ್ ಸ್ಟಾರ್ ಗೆ ಟಕ್ಕರ್ ಕೊಡೋದಕ್ಕೆ ಬರ್ತಿದ್ದಾರೆ ಮತ್ತೊಬ್ಬ ಗೋಲ್ಡನ್ ಸ್ಟಾರ್..!! ಯಾರದು..?
ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಾನೇ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಹುಡುಗ ಇದೀಗ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಆಗಿದ್ದಾರೆ.. ಸ್ಯಾಂಡಲ್ ವುಡ್ ಗೆ ಒಂದೊಳ್ಳೆ ಬ್ರೇಕ್ ಕೊಟ್ಟಂತಹ ಸಿನಿಮಾ ಅಂದರೆ ಅದು ಮುಂಗಾರು ಮಳೆ.. ಸಿನಿಮಾ ನೋಡಿದ ಮಂದಿ ಗಣೇಶ್ ಅವರ ಅಪ್ಪಟ ಅಭಿಮಾನಿಗಳು ಆಗಿದ್ದಂತು ಸುಳ್ಳಲ್ಲ...ಆದರೆ ಇದೀಗ ಈ ಗೋಲ್ಡನ್ ಸ್ಟಾರ್ ಗೆ ಟಕ್ಕರ್ ಕೊಡೋದಕ್ಕೆ ಅಂತಾನೇ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಗೋಲ್ಡನ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಟ್ಟಂತಹ ಗಣೇಶ್, ಮುಂಗಾರುಮಳೆ ಸಿನಿಮಾ ಮೂಲಕ ಹೊಸ ಮೈಲಿಗಲ್ಲು ಸೃಷ್ಠಿಸಿದ್ರು. ಕೋಟಿ ಸಂಭಾವನೆ ಪಡೆದ ಮೊದಲ ಕನ್ನಡದ ಸ್ಟಾರ್ ಆಗಿ ಹಲವು ದಾಖಲೆಗಳನ್ನ ಬರೆದರು. ಇಂತಹ ಗೋಲ್ಡನ್ ಸ್ಟಾರ್ಗೆ ಮತ್ತೊಬ್ಬ ಗೋಲ್ಡನ್ ಸ್ಟಾರ್ ಸೆಡ್ಡು ಹೊಡೆಯೋಕ್ಕೆ ಬರ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ರ ಮುದ್ದಿನ ಮಗ ವಿಹಾನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗೋಲ್ಡನ್ ದಂಪತಿಯಷ್ಟೇ ಕ್ಯೂಟ್ ಆಗಿರೋ ವಿಹಾನ್ ಗಣೇಶ್ ಅವರ ಹೋಮ್ ಬ್ಯಾನರ್ನಲ್ಲಿ ತಯಾರಾಗ್ತಿರೋ ಗೀತಾ ಸಿನಿಮಾದಲ್ಲಿ ಕ್ಯಾಮೆರಾ ಫೇಸ್ ಮಾಡಿದ್ದಾರೆ. ಇದನ್ನ ಗಣೇಶ್ ಅವರೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೀರೋ ಮಕ್ಕಳು ಹೀರೋ ಆಗುವುದು ಖಂಡಿತಾ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ.. ಬಾಲ ನಟನಾಗಿ ಎಂಟ್ರಿ ಕೊಟ್ಟಿರುವ ವಿಹಾನ್ ಮುಂದೆ ಗೋಲ್ಡನ್ ಸ್ಟಾರ್ ಆದ್ರೂ ಅನುಮಾನ ಪಡಬೇಕಾಗಿಲ್ಲ.
Comments