ಏ.17 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡುವುದಿಲ್ಲ : ಶಿಖಾ

ಇದೇ ತಿಂಗಳ 17 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಕಟ ಮಾಡಿವೆ. ಆದರೆ ಈ ಬಗ್ಗೆ ನಾವೆಲ್ಲಿಯೂ ಮಾಹಿತಿ ನೀಡಿಲ್ಲ. ಈ ಸುದ್ದಿಸತ್ಯಕ್ಕೆ ದೂರವಾದುದ್ದು. ಏಫ್ರಿಲ್ 17 ರಂದು ಫಲಿತಾಂಶ ಪಕ್ರಟವಾಗುವುದಿಲ್ಲ.
ನಾವು ಅಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡುವುದಿಲ್ಲವೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.ಇನ್ನೂ ಫಲಿತಾಂಶ ಪ್ರಕಟ ಮಾಡುವ ಬಗ್ಗೆ ಅಂತಿಮ ದಿನಾಂಕವನ್ನು ಘೋಷಣೆ ಮಾಡಿಲ್ಲ, ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಫಲಿತಾಂಶಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀಡುತ್ತೇವೆ ಅಂತ ಅವರು ಹೇಳಿದ್ದಾರೆ. 2019ನೇ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದಾರೆ. ಈ ವರ್ಷ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.
Comments