ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಸಿದ್ಧರಾದ್ರು ನಟ ಪ್ರಕಾಶ್ ರೈ : ಯಾಕೆ ಗೊತ್ತಾ..?

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾಗೆ ಬೆಂಬಲ ನೀಡುತ್ತಿರುವ ನಟ ಪ್ರಕಾಶ್ ರೈ ಈ ಬಾರಿ ಬೇರೆಯೇ ಥರನಾದ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಾನು ಸಿನಿಮಾ ಕೆಲಸದಲ್ಲಿ ಇನ್ನು ಮುಂದೆ ತೊಡಗಿಸಿಕೊಳ್ಳುವುದಿಲ್ಲವೆಂದಿದ್ದಾರೆ. ಮಂಡ್ಯ ಲೋಕ ಸಭೆ ಅಭ್ಯರ್ಥಿಯಾಗಿ ಸುಮಲತಾ ಆಯ್ಕೆ ಮಾಡಿರುವುದು ಸರಿಯಾದ ಕೆಲಸ. ನಿಖಿಲ್ ಕುಮಾರ ಸ್ವಾಮಿಗಿಂತ ಸುಮಲತಾ ಉತ್ತಮ ಆಯ್ಕೆ ಎಂದಿದ್ದಾರೆ.
ಅಂದಹಾಗೇ ಬೆಂಗಳೂರು ಕೇಂದ್ರದ ಪಕಷ್ಏತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಕಾಶ್ ರೈ ಮುಂದಿನ ಪ್ರಧಾನಿ ಮೋದಿಯಾಗುವುದು ನನಗೆ ಇಷ್ಟವಿಲ್ಲವೆಂದರು. ಅನುಭವ,ವಿಚಾರ ಲಹರಿ ಸೇರಿದಂತೇ ನೂರು ಪಟ್ಟು ನಿಖಿಲ್ ಕುಮಾರ ಸ್ವಾಮಿಗಿಂತ ಸುಮಲತಾ ಅವರೇ ಉತ್ತಮ. ಅವರನ್ನು ಈ ಬಾರಿ ಮಂಡ್ಯದ ಜನ ಗೆಲ್ಲಿಸಿದ್ದರೇ ಖಂಡಿತಾ ಒಳ್ಳೆಯದಾಗುತ್ತೆ ಎಂದಿದ್ದಾರೆ. ಇನ್ನು ಮಾದ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುವುದಿಲ್ಲ. ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ತಪ್ಪಲ್ಲ ಎಂದು ಹೇಳಿದರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ನನಗೆ ಇಷ್ಟವಿಲ್ಲ. ನನಗೆ ವೈಯಕ್ತಿಕ ದ್ವೇಷವಿಲ್ಲ, ಆದರೆ ಮೋದಿ ಅವರ ವಿಚಾರಧಾರೆಗಳು ನನಗೆ ಇಷ್ಟವಾಗಲ್ಲ ಎಂದಿದ್ದಾರೆ. ಗೆದ್ದರೆ ಕೆಲಸ ಮಾಡುತ್ತೇನೆ, ನಿಮಗಾಗಿ ಶ್ರಮಿಸುತ್ತೇನೆ, ಸೋತರೇ ಸಾರ್ವಜನಿಕ ಕೆಲಸದಲ್ಲಿದ್ದುಕೊಂಡೆ ಕೆಲಸ ಮಾಡಿಸುತ್ತೇನೆ ಎಂದರು. ಇನ್ನು ಸಿಕ್ಕ ಸಿಕ್ಕ ಸಿನಿಮಾಗಳನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವುದಿಲ್ಲ.ಒಂದೇ ತೆರನಾದ ಪಾತ್ರಗಳನ್ನು ಮಾಡಿ ಮಾಡಿ ನನಗೂ ಸಾಕಾಗಿದೆ. ಹಳೇ ಶೈಲಿಯಲ್ಲಿ ನಟನೆ ಮಾಡಲ್ಲ ಬಾಲಿಶವಾದ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂದರು.ನಾನೀಗ ಪ್ರಬುದ್ಧನಾಗಿದ್ದೇನೆ. ಒಂದೆರಡು ಮನ ಮುಟ್ಟುವ ಪಾತ್ರಗಳನ್ನು ಮಾಡುತ್ತೇನೆ, ಫುಲ್ ಟೈಂ ಚಿತ್ರೀಕರಣದಲ್ಲಿ ಇನ್ನು ಮುಂದೆ ಭಾಗಿಯಾಗುವುದಿಲ್ಲವೆಂದಿದ್ದಾರೆ. ನಿವೃತ್ತಿ ಪಡೆದ ನಂತರ ವ್ಯವಸಾಯ ಮಾಡಿಕೊಂಡು ಜೀವನ ಮಾಡಬೇಕು ಎಂದಿದ್ದಾರೆ.
Comments