ಯಶ್ ಜೊತೆ ನಟಿಸೋಕೆ ಡಿ ಬಾಸ್ ಗ್ರೀನ್ ಸಿಗ್ನಲ್ : ಟೈಟಲ್…?!!!

ಒಂದು ಕಾಲದಲ್ಲಿ ಬಾಸ್ ವಾರ್ ಶುರುವಾದಾಗ ಯಶ್ ಮತ್ತು ದರ್ಶನ್ ನಡುವೆ ಏನೋ ಇದೆ ಎಂಬ ಸುದ್ದಿ ಇಡೀ ಗಾಂಧಿನಗರವನ್ನೇ ಸುತ್ತುವರೆದಿತ್ತು. ಸ್ಟಾರ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಒಬ್ಬರನೊಬ್ಬರು ಕಾಲೆಳೆದುಕೊಳ್ಳುತ್ತಿದ್ದರು.. ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯೇ ಆಗಿತ್ತು. ಅಸಹ್ಯಕರ ಪೋಸ್ಟ್ ಮಾಡುವುದು, ಅಶ್ಲೀಲ ಸಂಬಾಷಣೆ ಹಾಕುವುದನ್ನ ಮಾಡುತ್ತಿದ್ದವರಿಗೆ ಸ್ಟಾರ್ ಗಳು ನೇರವಾಗಿಯೇ ಖಡಕ್ ವಾರ್ನಿಂಗ್ ಕೊಟ್ಟಿದ್ರು.
ಈ ಇಬ್ಬರು ಸ್ಟಾರ್ ಮಧ್ಯೆ ಜಗಳ, ಭಿನ್ನಾಭಿಪ್ರಯಾ ಇತ್ತೋ ಇಲ್ವೋ ಗೊತ್ತಿಲ್ಲ, ಆದರೆ ಸ್ಟಾರ್ ಫ್ಯಾನ್ಸ್ ನಡುವೆ ಮಾತ್ರ ಜೋರು ಯುದ್ಧವೇ ನಡೆದು ಬಿಟ್ಟಿತು. ಆದರೆ ಅದೆಲ್ಲ ಶಾಶ್ವತವಲ್ಲ ಎಂದು ತೋರಿಸಿದ್ದಾರೆ ನಟ ದರ್ಶನ್ ಮತ್ತು ಯಶ್. ಅದಕ್ಕೆ ಸಾಕ್ಷಿಯಾಗಿದ್ದು ಅಂಬಿ ಪತ್ನಿ ಸುಮಲತಾ ರಾಜಕೀಯ ಎಂಟ್ರಿ. ಹಾವು ಮುಂಗುಸಿ ಥರಾ ಕಚ್ಚಾಡುತ್ತಿದ್ದ ಫ್ಯಾನ್ಸ್ ಒಂದಾಗಿದ್ದಾರೆ. ಬಿಗ್ ಸ್ಟಾರ್ ಗಳು ಜೋಡೆತ್ತುಗಳ ಹಾಗೇ ಸುಮಲತಾ ಬೆನ್ನಿಗಿ ನಿಂತಿದ್ದಾರೆ ಇ ಇಬ್ಬರು.
ಇದೀಗ ದರ್ಶನ್ ಮತ್ತು ಸುದೀಪ್ ಹೆಸರು ಬದಲಾಗಿ ತೆರೆ ಮೇಲೆ ಯಶ್ ಮತ್ತು ದರ್ಶನ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಈಗಾಗಲೇ ಸಿನಿಮಾ ಟೈಟಲ್ ಕೂಡ ಭಾರೀ ಚರ್ಚೆಯಲ್ಲಿಯೇ ನಡೆಯುತ್ತಿದೆ. ಮಂಡ್ಯದಲ್ಲಿ ಜೋಡೆತ್ತುಗಳೆಂದೇ ಖ್ಯಾತರಾಗಿರುವ ಜೋಡಿ, ತೆರೆ ಮೇಲೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಬರಲಿದ್ದಾರೆ ಎಂಬ ಸುಳಿವು ಗಾಂಧಿ ನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಈಗಾಗಲೇ ದರ್ಶನ್ ಯಶ್ ಜೊತೆ ನಟಿಸೋಕೆ ನಾನ್ ರೆಡಿ ಎಂದಿದ್ದಾರಂತೆ. ಇನ್ನು ಯಶ್, ಸುಮ್ಮನಿರ್ತಾರೆಯೇ ಖಂಡಿತಾ ಗ್ರೀನ್ ಸಿಗ್ನಲ್ ಕೊಡ್ತಾರೆ ಎಮಬುದು ರಾಕಿಂಗ್ ಸ್ಟಾರ್ ಅಭಿಮಾನಿಗಳ ಮಾತು. ಒಂದು ವೇಳೆ ಸಿನಿಮಾ ಮಾಡುವುದೇ ಆದರೆ ಅದಕ್ಕೆ ಜೋಡೆತ್ತುಗಳು ಎಂದೇ ಟೈಟಲ್ ನಾಮಕರಣವಾದ್ರು ಆಶ್ಚರ್ಯವಿಲ್ಲ.
Comments