ಪ್ರಚಾರದ ವೇಳೆ ಯಶ್ ವಿರುದ್ಧ ರೊಚ್ಚಿಗೆದ್ದ ಜೆಡಿಎಸ್ ಅಭಿಮಾನಿಗಳು..!

ಮಂಡ್ಯದ ಕೆಲವು ಕಡೆ ಜೆಡಿಎಸ್ ನಾದ ಮುಗಿಲು ಮುಟ್ಟಿದ್ರೆ, ಮತ್ತೆ ಕೆಲವು ಕಡೆಈ ಬಾರಿ ಸುಮಲತಾದ್ದೇ ಜಯ ಎಂದು ಆರ್ಭಟಿಸುತ್ತಿದ್ದಾರೆ. ಮಂಡ್ಯ ಚುನಾವಣಾ ಕಾವು ಲೆಕ್ಕಾಚಾರಕ್ಕೂ ಸಿಗದಷ್ಟೂ ಗೊಂದಲಮಯವಾಗುತ್ತಿದೆ. ಕ್ಯಾಂಪೇನ್ ಬಿರುಸಿನಿಂದ ನಡೆಯುತ್ತಿದೆ. ಎರಡು ಸ್ಪರ್ಧಿಗಳು ಪರಸ್ಪರ ವಾಗ್ದಾಳಿ ಮಾಡುತ್ತಲೇ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಕೌಂಟರ್ ಡೈಲಾಗ್ ಗಳಿಗೆ ಇದೀಗ ಮಂಡ್ಯದ ಹಳ್ಳಿಯೊಂದರಲ್ಲಿ ಜನ ತಿರುಗಿ ಬಿದ್ದಿದ್ದಾರೆ.
ಈ ಹಿಂದೆಯೇ ನಿಖಿಲ್ ಕುಮಾರ ಸ್ವಾಮಿ ಕೂಡ ಯಶ್ ವಿರುದ್ಧ ತಿರುಗಿ ಬಿದ್ದಿದ್ದರು. ಆದರೆ ನಟ ಯಶ್ ಅಂಬಿಯಣ್ಣನಿಗೆ ಇರೋದೇ ಒಬ್ಬಳೇ ಹೆಂಡ್ತಿ, ನೀವೆಷ್ಟು ಸುಮಲತರನ್ನು ತಂದು ನಿಲಿಸಿದ್ರೂ ಅಷ್ಟೇ, ಅಂಬಿ ಪತ್ನಿ ಸುಮಲತಾ ಅಂಬರೀಶ್ ಅಷ್ಟೇ ಎಂದು ಖಡಕ್ ಟಾಂಗ್ ಕೊಟ್ಟಿದ್ದ ಬೆನ್ನಲ್ಲೇ ಜೆಡಿಎಸ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅಷ್ಟೇ ಅಲ್ಲಾ ನಿಖಿಲ್ ಪಿತ್ತ ಕೂಡ ನೆತ್ತಿಗೇರಿದೆ.ಹೋದಕಡೆಯೆಲ್ಲಾ ಸಿನಿಮೀಯ ಡೈಲಾಗ್ ಹೇಳೋ ಅಪೋಸಿನ್ ಪಕ್ಷದವರ ಬಗ್ಗೆ ಟೀಕಾರೋಪ ಮಾಡಿದ್ರು ನಿಖಿಲ್. ನಟ ಯಶ್ ಮಂಡ್ಯದ ಚಂದೂಪರ ಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಯಶ್ ಗೆ ಜನರು ವಾರ್ನಿಂಗ್ ಮಾಡಿದ್ದಾರಂತೆ. ದೊಡ್ಡ ಗೌಡರ ಕುಟುಂಬದ ಬಗ್ಗೆ ಮಾತನಾಡಿದ್ರೆ ಹುಷಾರ್ ಎಂದಿದ್ದಾರಂತೆ . ಪ್ರಚಾರದ ವೇಳೆ ಕುಮಾರಸ್ವಾಮಿ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಯಶ್ ವಿರುದ್ದ ಆರೋಪಿಸಿದ್ದಾರೆ. ಪ್ರಚಾರದ ವೇಳೆ ರಾಕಿಭಾಯ್ ಅವರ ವಾಹನವನ್ನು ತಡೆಗಟ್ಟಿದ ಜೆಡಿಎಸ್ ಕಾರ್ಯಕರ್ತರು ಕ್ಯಾಂಪೇನ್ಗೆ ಅಡ್ಡಪಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸುಮಲತಾ ಬೆಂಬಲಿಗರು ಕೂಡ ಮಧ್ಯ ಪ್ರವೇಶಿಸಿದ್ದರಿಂದ ಎರಡು ಗುಂಪುಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಎರಡು ಗುಂಪುಗಳನ್ನು ಪೊಲೀಸರು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆದರೂ ಕೂಡ ಎರಡು ಗುಂಪಿನ ಕಾರ್ಯಕರ್ತರು ಪರ-ವಿರೋಧಗಳ ಘೋಷಣೆಗಳನ್ನು ಮುಂದುವರಿಸಿದರು.ಇನ್ನು ವಿರೋಧ ಜೋರಾಗುತ್ತಿದ್ದಂತೆ ಯಶ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
Comments