‘ನಮ್ಮ ಹೀರೋ'ನಷ್ಟು ಪ್ರತಿಭಾವಂತನಲ್ಲ ನಿಮ್ಮ ವಿಜಯ್ ದೇವರಕೊಂಡ’ :ಮಾತು ಕೇಳಿ ಸಿಡಿದೆದ್ದ ಅರ್ಜುನ್ ರೆಡ್ಡಿ ಫ್ಯಾನ್ಸ್…!!!

ಸ್ಟಾರ್ ವಾರ್ ಕನ್ನಡದಲ್ಲಷ್ಟೇ ಅಲ್ಲಾ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲೂ ಇದೆ. ಅಂದಹಾಗೇ ಸ್ಟಾರ್ ಅಭಿಮಾನಿಗಳ ನಡುವೆ ಸಮರ ಶುರುವಾಗಿದೆ. ಅದೂ ಒಂದೇ ಚಿತ್ರರಂಗದ ನಟರ ಮಧ್ಯೆ ಅಲ್ಲಾ ಬದಲಾಗಿ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ. ರಶ್ಮಿಕಾ ಜೊತೆ ಕನ್ನಡದಲ್ಲಿ ಹೆಚ್ಚು ಚರ್ಚೆಯಾದ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನ ಶಾಹೀದ್ ಕಪೂರ್ ಫ್ಯಾನ್ಸ್ ನಡುವೆ ಜಗಳ ಆರಂಭವಾಗಿದೆ. ಡೈಲಾಗ್ ವಾರ್ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಪರಸ್ಪರ ಬೈಯ್ದಾಡುವ ಅಭಿಮಾನಿಗಳಿಗೆ ಕಾರಣರಾಗಿದ್ದಾರೆ ನಟ ವಿಜಯ್ ದೇವರಕೊಂಡಾ, ಶಾಹಿದ್.
ತೆಲುಗಿನಲ್ಲಿ ರೌಡಿ ಎಂದೇ ಖ್ಯಾತರಾಗಿರುವ 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆಯುತ್ತಿದೆ. ನಿನ್ನೆಯಷ್ಟೆ 'ಅರ್ಜುನ್ ರೆಡ್ಡಿ'ಯ ಹಿಂದಿ ರಿಮೇಕ್ 'ಕಬೀರ್ ಸಿಂಗ್' ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ ಈ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದೇ ತಡ ವಿಜಯ್ ದೇವರಕೊಂಡಾ ಬಗ್ಗೆ ನೆಗಟೀವ್ ಆಗಿ ಮಾತನಾಡುತ್ತಿದ್ದಾರೆ ಶಾಹಿದ್ ಅಭಿಮಾನಿಗಳು. ಶಾಹೀದ್ ಅಭಿನಯಕ್ಕೆ ಸ್ವತಃ ವಿಜಯ್ ದೇವರಕೊಂಡ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಶಾಹಿದ್ ಅಭಿಮಾನಿಯೊಬ್ಬರು ಈ ಟೀಸರ್ ನೋಡಿ, ನಮ್ಮ ಶಾಹಿದ್ ಅಷ್ಟು ಪ್ರತಿಭಾವಂತ ಅಲ್ಲ ನಿಮ್ಮ ಹೀರೋ ಎಂದು ವಿಜಯ್ ದೇವರಕೊಂಡ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಿರುವ ವಿಜಯ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದು, ಒರಿಜಿನಲ್ ಸಿನಿಮಾವನ್ನು ನಿಮ್ಮ ಶಾಹಿದ್ ಹಳ್ಳ ಹಿಡಿಸುತ್ತಿದ್ದಾರೆ. ವಿಜಯ್ ಅಭಿನಯದ ಮುಂದೆ ಶಾಹಿದ್ ಏನೂ ಅಲ್ಲ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.
Comments