ತನ್ನ ಬದುಕಿನಲ್ಲಿ ನಡೆದ ಕರಾಳ ದಿನಗಳನ್ನು ನೆನೆದು ಶೂಟಿಂಗ್ ಸೆಟ್'ನಲ್ಲೇ ಕಣ್ನೀರಿಟ್ಟ ಮಾಜಿ ನೀಲಿ ತಾರೆ...!!!

10 Apr 2019 5:00 PM | Entertainment
969 Report

ಮಾಜಿ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಶೂಟಿಂಗ್ ಸೆಟ್’ವೊಂದರಲ್ಲಿ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನೆದು ಗಳಗಳನೆ ಅತ್ತು ಬಿಟ್ಟರಂತೆ. ನಟಿ ಸನ್ನಿ ಲಿಯೋನ್  ಅವರ ಕುರಿತಾದ ಕರಣ್ ಜೀತ್ ಕೌರ್ ವೆಬ್ ಸೀರಿಸ್ ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಘಟ್ಟ ತಲುಪಲಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಸನ್ನಿ ಲಿಯೋನ್. Zee5 ನಲ್ಲಿ ಪ್ರಸಾರವಾಗುತ್ತಿರುವ ಸರಣಿಯ ಚಿತ್ರೀಕರಣದ ವೇಳೆ ಸಾಕಷ್ಟು ಭಾರೀ ನೊಂದ ಮನಸ್ಸಿನಿಂದ ಕಣ್ಣಿರಿಟ್ಟಿದ್ದಾರಂತೆ.

ಹೀಗೆಂದು ತಾವೇ ಖುದ್ದು ಹೇಳಿಕೊಂಡಿದ್ದಾರೆ ಸನ್ನಿ ಲಿಯೋನ್. ತಮ್ಮ ಜೀವನದಲ್ಲಿ ಕರಾಳ ದಿನಗಳು ನನ್ನನ್ನ ಬಹುಕಾಲ ಕಾಡಿ ಬಿಟ್ಟವು. ಸನ್ನಿ ಲಿಯೋನ್ ವೆಬ್ ಸೀರಿಸ್ ಶುರುವಿನಲ್ಲೇ ಬಹಳ ಹೈಪ್ ಕ್ರಿಯೇಟ್ ಮಾಡಿತ್ತು. ಸನ್ನಿ ಅನುಭವಿಸಿದ ಕಷ್ಟದ ದಿನಗಳು ಅದರಲ್ಲಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲಾ, ಸನ್ನಿ ನೀಲಿ ಲೋಕಕ್ಕೆ ರಾಣಿಯಾಗಿದ್ದು ಹೇಗೆ ಎಂಬುದನ್ನು ವೆಬ್’ಸೀರಿಸ್’ನಲ್ಲಿ ತೋರಿಸಲಾಗಿದ್ಯಂತೆ. ಅವರ ತಾಯಿ ಮರಣ, ತಂದೆಗೆ ಕ್ಯಾನ್ಸರ್​ ಬಂದಿದ್ದು, ನಂತರ ಅವರ ಅಗಲಿಕೆ ಹಾಗೂ ಸನ್ನಿಯ ಮದುವೆ. ಹೀಗೆ ಅವರ ಜೀವನದಲ್ಲಿ ಎಲ್ಲವೂ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನಡೆದು ಹೋಗುತ್ತಿತ್ತಂತೆ. ಈ ಭಾಗದ ಚಿತ್ರೀಕರಣದ ವೇಳೆ ಸನ್ನಿಗೆ ಆಗ ನಡೆದ ಘಟನೆಗಳೆಲ್ಲ ಕಣ್ಮುಂದೆ ಬಂದಂತಾಗಿ ತುಂಬಾ ಅಳುತ್ತಿದ್ದರಂತೆ. ಸನ್ನಿ ಕಣ್ಣೀರಿಡುವಾಗ ಪತಿ ಡ್ಯಾನಿಯಲ್​ ವೇಬರ್​ ಜೊತೆಯಲ್ಲೇ ಇದ್ದರೂ ಏನೂ ಮಾಡ ಅಸಹಾಯಕ ಸ್ಥಿತಿಯಲ್ಲಿ ಇರುತ್ತಿದ್ದರಂತೆ. ಕಾರಣ ಆಗಿದ್ದನ್ನು ಬದಲಾಯಿಸಲು ಸಾಧ್ಯವಿಲ್ಲದ ಕಾರಣ ಡ್ಯಾನಿಯಲ್​ ಮೂಕವಿಸ್ಮಿತರಾಗಿ ನಿಲ್ಲುತ್ತಿದ್ದರಂತೆ. ಇದರಿಂದ ಅವರಿಗೂ ನೋವಾಗುತ್ತಿತ್ತು ಎಂದೆಲ್ಲ ಸನ್ನಿ ಹೇಳಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments