ಗೆಳೆಯನ ಜೊತೆ ಬಿಕಿನಿಯಲ್ಲಿ ಕಾಣಿಸಿಕೊಂಡ ಸಂಯುಕ್ತಾ ವಿರುದ್ಧ ಅಭಿಮಾನಿಗಳ ಆಕ್ರೋಶ…!!!
ಅಂದಹಾಗೇ ಸದಾ ಒಂದಿಲ್ಲೊಂದು ಕಿರಿಕ್ ಮಾಡುತ್ತಾ ಸುದ್ದಿಯಾಗುತ್ತಿದ್ದ ನಟಿ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗಡೆ ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ. ವಿದೇಶಿ ಗೆಳೆಯನ ಜೊತೆ ಬೀಚ್ ವೊಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಸಂಯುಕ್ತಾ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಿಕಿನಿ ತೊಟ್ಟು ಹಾಟ್ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟಿರುವ ಸಂಯುಕ್ತಾ ವಿರುದ್ಧ ಇದೀಗ ಕನ್ನಾಡಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಮುದ್ರದ ದಡದಲ್ಲಿ ಬಿಕಿನಿ ಧರಿಸಿ ತಲೆ ಕೆಳಕಾಗಿ ನಿಂತು ತನ್ನ ಗೆಳೆಯನ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ತನ್ನ ಇನ್ಸ್ ಸ್ಟ್ರಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಲೆ ಕೆಳಕಾಗಿ ನಿಂತಿರುವ ಸಂಯುಕ್ತಾ ಕಾಲನ್ನು ಆಕೆಯ ಗೆಳೆಯ ಹಿಡಿದಿರುವ ಫೋಟೋ ಬಗ್ಗೆ ಕಮೆಂಟ್ ಮಾಡಿದ್ದಾರೆ ಅಭಿಮಾನಿಗಳು. ಈಗಾಗಲೇ ಸಾಕಷ್ಟು ಬಾರಿ ಬಿಕಿನಿ ಧರಿಸಿ ಹಾಟ್ ಫೋಟೋ ಶೂಟ್ ಮಾಡಿಸಿದ್ದಕ್ಕೆ ಅಭಿಮಾನಿಗಳಿಂದ ಟ್ರೋಲ್ ಆಗಿದ್ದ ಸಂಯುಕ್ತಾ ಹೆಗಡೆ ಬಗ್ಗೆ ಈಗ ಏನ್ ಮಾತನಾಡಿದ್ದಾರೆ ಗೊತ್ತಾ..? ಈ ಫೋಟೋ ನೋಡಿದ ಕೆಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಯುಕ್ತ ಫೋಟೋ ನೋಡಿ ವಾಟ್ ಎ ಫಿಟ್ನೆಸ್, ಸೂಪರ್ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಸಂಯುಕ್ತ ಕನ್ನಡ ಚಿತ್ರರಂಗದ ಮಾನ ಮಾರ್ಯದೆ ತೆಗೆಯುತ್ತಿದ್ದಾರೆ ಎಂದು ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Comments