ಇಂದಿರಾಗಾಂಧಿ ಪಾತ್ರ ಮಾಡೋಕೆ ತುದಿಗಾಲಲ್ಲಿ ನಿಂತ ಸ್ಟಾರ್ ಹೀರೋಯಿನ್..!!!

ಇತ್ತೀಚಿಗಂತೂ ಸ್ಟಾರ್ ನಾಯಕರ, ರಾಜಕೀಯದಲ್ಲಿ ಹೆಸರು ಮಾಡಿದವರ ಬಯೋಪಿಕ್ ಗಳು ತೆರೆ ಮೇಲೆ ಅಬ್ಬರಿಸುತ್ತಿವೆ. ಸದ್ಯಕ್ಕೆ ದೇಶ ಕಂಡ ಮಹಿಳಾ ಪ್ರಧಾನಿ ಜೀವನ ಹೇಗಿತ್ತು ಎಂಬುದನ್ನು ಈಗಿನ ಜನರೇಷನ್ ಗೆ ತಿಳಿಸುವುದಕ್ಕಾಗಿ ವೆಬ್ ಸೀರಿಸ್ ವೊಂದು ಬರಲಿದೆ. ಅಂದ ಹಾಗೇ ಪ್ರಭಾವಿ ನಾಯಕರೇ ಆಕೆಯ ಮುಂದೆ ನಿಲ್ಲಲ್ಲು ಧೈರ್ಯ ಮಾಡುತ್ತಿರಲಿಲ್ಲ, ಒಂದು ಕಾಲದಲ್ಲಿ ಆಕೆಯ ಹೆಸರು ಕೇಳಿದ್ರೆ ಗಢಗಢ ನಡುಗುತ್ತಿದ್ದರಂತೆ.
ಅದೇನೆ ಇರಲೀ ಆಕೆಯ ಪಾತ್ರ ಮಾಡೋಕೆ ಸ್ಟಾರ್ ಹೀರೋಯಿನ್ ಗಳು ತಾ ಮುಂದು, ನಾ ಮುಂದು ಎನ್ನುತ್ತಿದ್ದಾರಂತೆ. ಅದು ಯಾರ ವೆಬ್ ಸೀರಿಸ್ ಗೊತ್ತಾ…? ಭಾರತದ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ.ಇಂದಿರಾ ಗಾಂಧಿ ಜೀವನ ಕುರಿತಾಗಿ ವೆಬ್ ಸೀರಿಸ್’ವೊಂದು ತಯಾರಾಗ್ತಿದೆ. ಸೀರಿಸ್ ನಲ್ಲಿ ಇಂದಿರಾ ಪಾತ್ರ ಮಾಡಲು ನಟಿ ವಿದ್ಯಾ ಬಾಲನ್ ತುದಿಗಾಲಲ್ಲಿ ನಿಂತು ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾರಂತೆ.
ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾ ಬಾಲನ್ ತಮ್ಮ ಪತಿ ಸಿದ್ಧಾರ್ಥ ರಾಯ ಕಪೂರ್ ಅವರು ಈ ವೆಬ್ ಸೀರಿಸ್ ತಯಾರು ಮಾಡುತ್ತಿದ್ದಾರೆ. ಅದರಲ್ಲಿ ನಾನು ಪಾತ್ರ ಮಾಡಲು ಕಾಯುತ್ತಿದ್ದೇನೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಏನಾಗುತ್ತೋ ಗೊತ್ತಿಲ್ಲ. ಯಾರಿಗೆ ಆ ಅವಕಾಶ ಲಭಿಸುತ್ತೋ ಇನ್ನೂ ಗೊತ್ತಿಲ್ಲವೆಂದಿದ್ದಾರೆ. ವೆಬ್ ಸೀರಿಸ್ ಒಂದು ಪರಿಶ್ರಮದ ಕೆಲಸ. ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಅದಕ್ಕೆ ಪೂರ್ವ ಸಿದ್ಧತೆಯೂ ಕೂಡ ಮಾಡಲಾಗಿದೆ ಎಂದಿದ್ದಾರೆ.
Comments