‘ನಾನು ಆ ಪಾತ್ರ ಮಾಡಲು ಸಾಧ್ಯವೇ ಇಲ್ಲ, ಅಭಿನಯಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲವೆಂದ ಬಿಗ್ ಬಿ’…?!!!

ಅಮಿತಾಭ್ ಯಾವ ಪಾತ್ರಗಳಿಗೂ ಜೀವ ತುಂಬುವ ವ್ಯಕ್ತಿ. ಬಾಲಿವುಡ್ ನಲ್ಲಿ ಬಿಗ್ ಬಿ ಎಂದೇ ಫೇಮಸ್ ಆಗಿರುವ ಅಮಿತಾಭ್ ಜೊತೆ ಒಂದು ಸಣ್ಣ ಪಾತ್ರವಾದ್ರೂ ಮಾಡಬೇಕು ಎಂದು ಅದೆಷ್ಟು ಸ್ಟಾರ್ ಕಲಾವಿದರು ಹಾತೊರೆಯುತ್ತಿರುತ್ತಾರೆ. ಬಿಗ್ ಬಿ ಎಂತಹ ಪಾತ್ರ ಕೊಟ್ರೂ ನಾನ್ ಸೈ ಎಂದು ಹೇಳುವ ಮಹಾನ್ ಕಲಾವಿದ. ಆದರೆ ಬಿಗ್ ಬಿ ತನ್ನ ಬಳಿ ಬಂದ ಬಿಗ್ ಆಫರ್ ವೊಂದನ್ನು ತಿರಸ್ಕರಿಸಿಬಿಟ್ರಂತೆ. ಕಾರಣ.... ಆ ಪಾತ್ರ ಮಾಡಲು ಅಮಿತಾಭ್ ಮನಸ್ಸು ಒಪ್ಪಲಿಲ್ಲವಂತೆ.
ಅಮಿತಾಬ್ ತಾನು ಆ ಪಾತ್ರ ಮಾಡಲಾರೆ ಎಂದು ನಿರಾಕರಿಸಿದ್ದು ಹಾಲಿವುಡ್ ಸಿನಿಮಾದ್ದು. ಅದು ಪಾಕಿಸ್ತಾನಿಯ ಪಾತ್ರವಂತೆ. ಅದಕ್ಕಾಗಿ ನಾನು ಪಾತ್ರ ಮಾಡಲು ನೋ ಎಂದು ಬಿಟ್ಟೆ ಎಂದಿದ್ದಾರೆ.ತಮಿಳಿನ ಸಿನಿಮಾವೊಂದರಲ್ಲಿ ಬ್ಯುಸಿಯಾಗಿರುವ ಅಮಿತಾಭ್ ಬಚ್ಚನ್ ಅವರ ಪೋಸ್ಟರ್’ವೊಂದು ಇತ್ತೀಚಿಗೆ ರಿಲೀಸ್ ಆಗಿತ್ತು. ಯಾವ ಪಾತ್ರ ಮಾಡೋಕೆ ಹಿಂದೆ ಮುಂದೆ ಯೋಚಿಸುವುದಿಲ್ಲ. ನನ್ನ ಬಳಿ ಬರುವ ಎಲ್ಲಾ ಪಾತ್ರಕ್ಕೂ ನಾನು ಸೈ ಎನ್ನುತ್ತೇನೆ, ಆದರೆ ನಾನು ಪಾಕಿಯ ಪಾತ್ರ ಮಾಡೋಕೆ ಯೋಚಿಸದೇ ನಿರಾಕರಿಸಿಬಿಟ್ಟೆ ಎಂದರು.ಆಸ್ಕರ್ ವಿಜೇತ ರಸೂಲ್ ಪೂಕುಟ್ಟಿ ಅವರು ನಿರ್ದೇಶಕನಾಗಿ ಹೊಸ ಯೋಜನೆ ಆರಂಭಿಸಲಿದ್ದಾರೆ. ಇವರು ತಮ್ಮ ಮುಂದಿನ ಹಾಲಿವುಡ್ ಸಿನಿಮಾದಲ್ಲಿ ಪಾಕಿಸ್ತಾನಿಯ ಪಾತ್ರದಲ್ಲಿ ನಟಿಸುವಂತೆ ಅಮಿತಾಭ್ ಅವರನ್ನು ಕೇಳಿದ್ದರಂತೆ. ಅದಕ್ಕೆ ಅಮಿತಾಭ್ ಯೋಚನೆಯೇ ಮಾಡದಂತೆ ಇಲ್ಲ ಎಂದಿದ್ದಾರಂತೆ. ಸಿನಿಮಾದಲ್ಲಿ ಪಾತ್ರ ಕೇಳದೇ ಕಥೆ ಕೇಳಿ ಓಕೆ ಎಂದಿದ್ದರಂತೆ. ಆದರೆ ಇದೀಗ ನಾನು ಮಾಡಲ್ಲ ಎನ್ನುತ್ತಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಬಿಗುವಿನ ವಾತವರಣದಿಂದ ಪಾತ್ರ ಮಾಡುವುದು ಸರಿಯಿಲ್ಲವೆಂದು ನಿರ್ಧರಿಸಿ ನಾನು ನೋ ಎಂದಿದ್ದೇನೆ ಎಂದು ತಿಳಿಸಿದ್ದಾರೆ.
Comments