'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ನಟನಿಗೆ ನಿಶ್ಚಿತಾರ್ಥದ ಸಂಭ್ರಮ…!

ಆಪರೇಷನ್ ಅಲಮೇಲಮ್ಮ...ಖ್ಯಾತಿಯ ರಿಷಿ ಈ ಹಿಂದೆ ಚಿಕ್ಕಮ್ಮನ ಗಲಾಟೆ ವಿಚಾರದಲ್ಲಿ ಸುದ್ದಿಯಾಗಿದ್ದರು. ಅದೇ ರಿಷಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ವಾತಿ ಎಂಬುವವರೊಂದಿಗೆ ರಿಷಿ ಹೊಸ ಬದುಕು ಶುರು ಮಾಡಿದ್ದಾರೆ. ರಿಷಿ ಮತ್ತು ಸ್ವಾತಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರವಷ್ಟೇ ಹೈದರಬಾದಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಎರಡು ಕುಟುಂಬದವರ ಸ್ನೇಹಿತರು, ಆತ್ಮೀಯರು, ಚಿತ್ರರಂಗದ ಕೆಲ ಸ್ನೇಹಿತರು ರಿಷಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.'
ಗುಳ್ಟು' ಸಿನಿಮಾದ ನಟ ನವೀನ್ ನವ ಜೋಡಿಗೆ ಶುಭ ಹಾರೈಸಿದರು. ಅಂದಹಾಗೇ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ರಿಷಿ ನಟನೆಯ ಕವಲುದಾರಿ ಸಿನಿಮಾ ಕೂಡ ಶುಕ್ರವಾರ ರಿಲೀಸ್ ಆಗುತ್ತಿದೆ.. ಒಂದು ಕಡೆ ಸಿನಿಮಾದ ಸಂಭ್ರಮವಾದರೆ, ಮತ್ತೊಂದು ಕಡೆ ವೈಯಕ್ತಿಕ ಜೀವನದ ಸಂತಸದ ಕ್ಷಣದಲ್ಲಿ ರಿಷಿ ಇದ್ದಾರೆ.'ಅನುರೂಪ' ಧಾರಾವಾಹಿಯಲ್ಲಿ ನಟಿಸಿದ್ದ ರಿಷಿ 'ಆಪರೇಷನ್ ಅಲಮೇಲಮ್ಮ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ 'ಕವಲುದಾರಿ'ಗೆ ನಾಯಕರಾಗಿ ಆಯ್ಕೆ ಆದರು. ಚಿಕ್ಕಮ್ಮನ ಜೊತೆ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ನಟ ರಿಷಿ. ಸ್ವತಃ ಚಿಕ್ಕಮ್ಮನೇ ರಿಷಿ ಮೇಲೆ ಕಂಪ್ಲೇಂಟ್ ಕೂಡ ಕೊಟ್ಟಿದ್ದರು. ಆ ನಂತರ ಮಾಧ್ಯಮಗಳ ಎದುರು ಬಂದು ಘಟನೆ ಬಗ್ಗೆ ಸ್ಪಷ್ಟೀಕರಣ ಕೂಡ ಕೊಟ್ಟಿದ್ರು ನಟ ರಿಷಿ.
Comments