ಕ್ಯಾಂಪೇನ್ ಮಾಡುವಾಗ ದರ್ಶನ್ ಗೆ ಮಂಡ್ಯದಲ್ಲಿ ಸಿಕ್ಕುದ್ರು ಹೊಸ ಹೀರೋಯಿನ್..!!

ಸುಮಲತಾ ಪರವಾಗಿ ಈಗಾಗಲೆ ಮಂಡ್ಯದಲ್ಲಿ ದರ್ಶನ್ ಯಶ್ ಕ್ಯಾಂಪೇನ್ ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ದರ್ಶನ್ ಎಂದ್ರೆ ಮಂಡ್ಯ ಜನತೆಗೆ ಒಂಥರಾ ಪ್ರೀತಿ.. ಅಂಬರೀಶ್ ಬಿಟ್ಟರೆ ಮಂಡ್ಯದ ಜನತೆ ಇಷ್ಟ ಪಡೋದು ದರ್ಶನ್ ಅವರನ್ನೆ.. ಅದಕ್ಕಾಗಿಯೇ ದರ್ಶನ್ ಅವರನ್ನು ಅಭಿಮಾನಿಗಳು ಡಿ ಬಾಸ್ ಎಂದು ಕರೆಯುತ್ತಾರೆ.. ದರ್ಶನ್ ಅವರು ಹೋದ ಕಡೆಯಲ್ಲೆಲ್ಲಾ ಜನವೋ ಜನ… ಅವರಿಗೆ ಹಾಕುವ ಹೂ ಮಾಲೆ, ಹಣ್ಣಿನ ಹಾರ ಎಲ್ಲವೂ ಕೂಡ ಅವರ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ.
ದರ್ಶನ್ ಹೋದ ಕಡೆಯಲ್ಲೆಲ್ಲಾ ದರ್ಶನ್ಗೆ ಅಭಿಮಾನಿಗಳು ಸಿನಿಮಾ ಡೈಲಾಗ್ ಹೇಳುವಂತೆ ಒತ್ತಾಯ ಮಾಡೋದು ಕಾಮನ್ ಆಗಿ ಬಿಟ್ಟಿದೆ.. ಕ್ಯಾಂಪೇನ್ ಗೆ ಹೋದ ಕಡೆಯಲೆಲ್ಲಾ ದರ್ಶನ್ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಹೋದ ಕಡೆಯಲೆಲ್ಲಾ ಡೈಲಾಗ್ ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಮಂಡ್ಯದಲ್ಲಿ ಒಬ್ಬ ಹೆಣ್ಣು ಮಗಳು ಡೈಲಾಗ್ ಹೇಳುವಂತೆ ಕೇಳಿದ್ದಾಳೆ.. ಅದಕ್ಕೆ ದರ್ಶನ್ ಏನ್ ಹೇಳಿದ್ದಾರೆ ಗೊತ್ತಾ.. ಒದೊಂದು ಬಾರಿ ಸುಮಲತಾ ಅವರನ್ನು ಗೆಲ್ಲಿಸಿಕೊಡಿ, ಡೈಲಾಗ್ ಏನು ನಿಮ್ಮ ಜೊತೆ ಡ್ಯುಯೆಟ್ ಹಾಡ್ತೀನಿ ಎಂದಿದ್ಧಾರೆ. ಒಟ್ಟಾರೆಯಾಗಿ ದರ್ಶನ್ಗೆ ಮಂಡ್ಯದಲ್ಲಿ ಡ್ಯುಯೆಟ್ ಹಾಡಲು ಹೊಸ ಹೀರೋಯಿನ್ ಸಿಕ್ಕಿದ್ದಾಳೆ ಎಂದು ಮಂಡ್ಯ ಜನ ನಸು ನಕ್ಕಿದಂತು ಸುಳ್ಳಲ್ಲ..
Comments