ನೀವು ಯಾರ ಕಡೆ ಪ್ರಚಾರ ಮಾಡುತ್ತೀರಾ ಎಂದಿದ್ದಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಹೇಳಿದ್ದೇನು ಗೊತ್ತಾ..?

ಈಗಾಗಲೇ ಸ್ಯಾಂಡಲ್ ವುಡ್ ನ ಕೆಲ ಸ್ಟಾರ್ ಗಳು ಮಂಡ್ಯ ಜಿಲ್ಲೆಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ಪರ ಪ್ರಚಾರವನ್ನು ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ಪ್ರೇಮ್ ಸೇರಿದಂತೆ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ . ಆದರೆ ಸುದೀಪ್ ಯಾರ ಪರ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹಾಗೂ ಸ್ಯಾಂಡಲ್ ವುಡ್ ಮಂದಿಗೂ ಕೂಡ ಇತ್ತು. ಆದರೆ ಇದೀಗ ಸುದೀಪ್ ಅವರೆ ನಾನು ಯಾರ ಪರವಾಗಿಯೂ ಕೂಡ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದ್ರೆ ಕಿಚ್ಚ ಸುದೀಪ್ ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆಹಾಕಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ನಾನು ಯಾರ ಪರವೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲ್ಲ. ನಾನು ಕೋಟಿಗೊಬ್ಬ-3 ಶೂಟಿಂಗ್‍ಗಾಗಿ ಹೈದ್ರಾಬಾದ್‍ನಲ್ಲಿದ್ದೇನೆ. ಬಳಿಕ ದಬಾಂಗ್-3 ಶೂಟಿಂಗ್‍ಗೆ ತೆರಳಲಿದ್ದೇನೆ ಎಂದು ಸುದೀಪ್ ಆಪ್ತವಲಯ ತಿಳಿಸಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುದೀಪ್ ಸದ್ಯ ರಾಜಕೀಯ ವಲಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.. ಸುದೀಪ್ ಸುಮಲತಾ ಮತ್ತು ನಿಖಿಲ್ ಇಬ್ಬರಿಗೂ ಆಪ್ತರಾಗಿರುವುದರಿಂದ ಒಬ್ಬರ ಪರ ಪ್ರಚಾರ ಮಾಡಿದರೆ ಮತ್ತೊಬ್ಬರಿಗೆ ಬೇಸರ ಹಾಗಾಗಿ ಯಾರ ಪರವಾಗಿಯೂ ಕೂಡ ಪ್ರಚಾರ ಮಾಡುವುದಿಲ್ಲ ಎನ್ನಲಾಗುತ್ತಿದೆ.
Comments