ಸ್ಯಾಂಡಲ್ ವುಡ್'ನ ಖ್ಯಾತ ನಟಿಗೆ ಆಕ್ಸಿಡೆಂಟ್...!!!
ಕನ್ನಡದ ಖ್ಯಾತ ನಟಿಮದುವೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕ್ಸಿಡೆಂಟ್ ಆಗಿದೆ. ಬಿಗ್ ಬಾಸ್ ಸ್ಪರ್ಧಿಯು ಕೂಡ ಆಗಿರುವ ಈ ನಟಿ ತಮ್ಮ ಆಪ್ತರ ಮದುವೆಗೆಂದು ಹೋಗುತ್ತಿದ್ದರೆನ್ನಲಾಗಿದೆ. ಸಿನಿಮಾಗಳಿಂದ ತುಂಬಾ ವರ್ಷಗಳ ಬ್ರೇಕ್ ಪಡೆದು ಆ ನಂತರ ಬಿಗ್ ಬಾಸ್ ಮೂಲಕ ಮತ್ತೆ ಕಾಣಿಸಿಕೊಂಡಿಡಿದ್ದ ನಟಿ ಚಂದ್ರಿಕಾ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ತಮ್ಮ ಹತ್ತಿರದವರ ಮದುವೆಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅಂಬೇಡ್ಕರ್ ಭವನ ಬಳಿ ಅವರ ಕಾರಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಟಿ ಚಂದ್ರಕಾಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಂದಹಾಗೇ ಸಾಹಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿರುವ ಚಂದ್ರಿಕಾ ಬಿಗ್’ಬಾಸ್ ಸ್ಪರ್ಧಿಯು ಆಗಿದ್ದರು. ಚಂದ್ರಕಾಗೆ ಒಬ್ಬ ಮಗನಿದ್ದಾನೆ.
Comments