ಅರ್ಜುನ್ ಜನ್ಯ ಕರೆದ್ರು ಹಾಡಲು ಹೋಗಿಲ್ವಂತೆ ಹನುಮಂತಪ್ಪ : ಏಕೆ ಗೊತ್ತಾ...?
ಸರಿಗಮಪ ಸೀಸನ್ 15 ರ ರನ್ನರ್ ಅಪ್ ಆಗಿ ಕರ್ನಾಟಕದ ಮನೆ ಮಾತಾದ ಸಂಗೀತಗಾರ ಹನುಮಂತಪ್ಪ ಇದೀಗ ಮುಂಬರುವ ಚುನಾವಣೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಎಲ್ಲೋ ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಕುರಿ ಕಾಯುತ್ತಾ ಬಾಯಿಗೆ ಬಂದ ಹಾಡನ್ನು ಗುನುಗುತ್ತಿದ್ದ ಮುಗ್ಧ ಹನುಮಂತಪ್ಪ. ಇಂದು ಕರ್ನಾಟಕದ ಅದ್ಭುತ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಅಂತಹದ್ದೊಂದು ವೇದಿಕೆ ಕೊಟ್ಟಿದ್ದು ಸರಿಗಮಪ ಸಂಗೀತ ಶೋ. ಇಂದು ಹನುಮಂತಪ್ಪ ಸಿಕ್ಕಾಪಟ್ಟೆ ಬ್ಯುಸಿ, ಆರ್ಕೆಸ್ಟ್ರಾ, ರೆಕಾರ್ಡಿಂಗ್ ಅಂತಾ ಬಿಡುವಿಲ್ಲದೇ ಕೆಲಸ ಮಾಡುತ್ತಿರುತ್ತಾರೆ.
ಇವರ ಭೇಟಿಗೆ, ಸೆಲ್ಫಿಗೆ ಜನ ಮುಗಿ ಬೀಳುತ್ತಾರೆ. ಇವರ ಹಾಡು ಕೇಳಲು, ಅವರ ಸಂಗೀತಕ್ಕೆ ಕುಣಿಯಲ್ಲು ಅದೆಷ್ಟೋ ಅಭಿಮಾನಿಗಳು ಕಾತುರರಾಗಿದ್ದಾರೆ. ಇಂದು ಕರ್ನಾಟಕದ ಸ್ಟಾರ್ ಆಗಿದ್ದಾರೆ. ಆದರೆ ತನ್ನ ಹಾಡನ್ನು ಗುರುತಿಸಿ, ಅದಕ್ಕೆ ಉತ್ಸಾಹ ತುಂಬಿ ನೀರೆರೆದು ಪೋಷಿಸಿದ ತೀರ್ಪುಗಾರರಲ್ಲಿ ಒಬ್ಬರಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಹನುಮಂತನನ್ನು ಕರೆದು ಹಾಡೊಂದನ್ನು ಹಾಡು ಎಂದು ಅವಕಾಶ ಕೊಟ್ರೆ, ಹೋಗಿಲ್ವಂತೆ ಹನುಮಂತಪ್ಪ.ಅಂದಹಾಗೇ ಈ ವಿಚಾರ ಚರ್ಚೆಯಾಗಿದ್ದು ಸರಿಗಮಪ ವೇದಿಕೆಯಲ್ಲಿ .
ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸೀಸನ್ 16 ರಲ್ಲಿ ಯುಗಾದಿ ಪ್ರಯುಕ್ತ ಅತಿಥಿಯಾಗಿ ಬಂದು ಹಾಡಿದ ಹನುಮಂತಪ್ಪನ ಬಗ್ಗೆ ಅರ್ಜುನ್ ಜನ್ಯಾ ಮಾತನಾಡಿದ್ದಾರೆ. ಸರ್, ನಾನು ಒಂದು ದೊಡ್ಡ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದೀನಿ, ದೊಡ್ಡ ಡೈರೆಕ್ಟರ್ ಸಿನಿಮಾ ಅದು. ಆ ಸಿನಿಮಾಗೆ ಹನುಮಂತಪ್ಪನ ಕೈಯಿಂದ ಹಾಡು ಹಾಡಿಸ ಬೇಕು ಎಂದು ಎಷ್ಟು ಸಲ ಕರೆದಿದ್ದೀನಿ. ಆದರೆ ಹನುಮಂತಪ್ಪ ರೆಕಾರ್ಡಿಂಗ್ ಗೆ ಬರಲೇ ಇಲ್ಲವೆಂದು ನಗುತ್ತಾ ಅರೋಪಿಸಿದ್ರು. ಆದರೆ ಹನುಮಂತಪ್ಪ,ಅಷ್ಟೇ ನಯವಾಗಿ, ನಗುತ್ತಾ, ಸರ್ ತುಂಬಾ ಬಿಸಿ ಇದ್ದೀನಿ ಸರ್ , ಖಂಡಿತಾ ಬಂದು ಹಾಡುತ್ತೇನೆ. ನೋಡ್ಕೊಳ್ಳಿ ಬೇಗ ಬರ್ತೀನಿ ಎಂದು ಹೇಳಿದ್ರು ಅದಕ್ಕೆ ಅರ್ಜುನ್ ಜನ್ಯಾ. ಓಕೆ ನೀನು ಯಾವಾಗಲಾದ್ರು ಬಾ ನೀನು ಬರೋ ತನಕ ಕಾದು ನಿನ್ನಿಂದಲೇ ಹಾಡಿಸುತ್ತೇನೆಂದರು. ಮಧ್ಯೆ ನಿರೂಪಕಿ ಅನುಶ್ರೀ ಕಾಲೆಳೆದ್ರು.
Comments