ಗಂಡು ಮಗುವಿಗೆ ತಂದೆಯಾಗಿರುವ ಖುಷಿಯಲ್ಲಿ ಸ್ಯಾಂಡಲ್ ವುಡ್’ನ ಸ್ಟಾರ್ ಹೀರೋ…!
ಕನ್ನಡ ಸಿನಿಮಾ ಫೀಲ್ಡ್ ನಲ್ಲಿ ಹೊಸ ಹೊಸ ಸಿನಿಮಾಗಳು ಮೂಡಿ ಬರುತ್ತಿವೆ. ಒಂದಕ್ಕೊಂದು ವಿಭಿನ್ನವಾದ ಚಿತ್ರಗಳು ತೆರೆ ಕಾಣುತ್ತಿವೆ. ನಮ್ಮಲ್ಲೂ ಉತ್ತಮ ನಿರ್ದೇಶನ, ಚಿತ್ರ ಕಥೆ ಎಲ್ಲವೂ ಇದೆ ಎಂದು ತೋರಿಸಿಕೊಟ್ಟ ಅನೇಕ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿವೆ. ಅಂತಹ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಯುವ ನಿರ್ದೇಶಕ ರಿಷಬ್ ಶೆಟ್ಟಿಗೂ ಸಲ್ಲುತ್ತದೆ.
ಅಂದಹಾಗೇ ಇತ್ತೀಚಿಗೆ ರಿಲೀಸ್ ಆಗಿ ಬಹು ಬೇಡಿಕೆ ಚಿತ್ರವಾಗಿರುವ ಬೆಲ್ ಬಾಟಂ ನಲ್ಲಿ ಹೀರೋ ಆಗಿ ಕಾಣಿಸಿಕೊಂಡ ರಿಶಬ್ ಶೆಟ್ಟಿ ರಿಯಲ್ ಲೈಫ್ ನಲ್ಲಿ ತಂದೆಯಾಗಿದ್ದಾರೆ. ಯುಗಾದಿ ಸಂಭ್ರಮದಲ್ಲಿಯೇ ಹಬ್ಬದ ಖುಷಿ ಜೊತೆ ಬಂಪರ್ ಗಿಫ್ಟ್ ಥರಾ, ರಿಷಬ್ ಪತ್ನಿ ಪ್ರಗತಿ ಹಬ್ಬದ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪತ್ನಿ ಮತ್ತು ಮಗುವಿನ ಜೊತೆ ಸೆಲ್ಫಿ ತೆಗೆದುಕೊಂಡಿರುವ ರಿಷಬ್ ಶೆಟ್ಟಿ yes its a hero ಎಂದು ಬರೆದುಕೊಂಡಿದ್ದಾರೆ. 2017 ರಲ್ಲಿ ಸಾಫ್ಟ್ ವೇರ್ ಉದ್ಯೋಗಿ ಪ್ರಗತಿಯನ್ನು ವರಿಸಿದ ರಿಷಬ್ ಶೆಟ್ಟಿ ಕಳೆದ ನವೆಂಬರ್ ನಲ್ಲೇ ತಾನು ತಂದೆಯಾಗುತ್ತಿದ್ದೇನೆ ಎಂಬ ಖುಷಿಯನ್ನು ಟ್ವೀಟ್ ಮಾಡುವುದರ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದರು. ಮಾರ್ಚ್ ನಲ್ಲಿ ಪ್ರಗತಿ ಸೀಮಂತ ಕಾರ್ಯವೂ ಅದ್ದೂರಿಯಾಗಿ ನಡೆದಿತ್ತು. ಡಿಟಕ್ಟೀವ್ ದಿವಾಕರನ ಪಾತ್ರದಲ್ಲಿ ಕಾಣಿಸಿಕೊಂಡ 'ಬೆಲ್ ಬಾಟಂ' ಸಿನಿಮಾ ಯಶಸ್ವಿಯಾಯ್ತು. ಬೆಲ್ ಬಾಟಂ ಭಾಗ-2 ಮಾಡೋಕು ತಯಾರಿ ನಡೆಯುತ್ತಿದೆ. ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಸಿನಿಮಾಗಳನ್ನು ಕೊಟ್ಟು ಅಭಿಮಾನಿಗಳ ಮನಸ್ಸಲ್ಲಿ ನೆಲೆಯೂರಿದ್ದಾರೆ ರಿಷಬ್.
Comments