ಮಧ್ಯರಾತ್ರಿಯಲ್ಲೇ ತನ್ನ ರಿಯಲ್ ಲೈಫ್ ಹೀರೋನ ಪರಿಚಯ ಮಾಡಿಕೊಟ್ಟ ಸ್ಟಾರ್ ಹೀರೋಯಿನ್...!!!

ಸ್ಯಾಂಡಲ್’ವುಡ್ ನಟಿ ಮೇಘನಾ ಇತ್ತೀಚಿಗೆ ಸುದ್ದಿಯಾಗಿದ್ರು. ಅವರ ಹೆಸರು ಸ್ಟಾರ್ ಹೀರೋನ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಇದ್ದಕ್ಕಿದ್ದ ಹಾಗೇ ಈ ನಟಿ ಮಧ್ಯರಾತ್ರಿಯಲ್ಲೇ ತನ್ನ ರಿಯಲ್ ಲೈಫ್ ಹೀರೋನಾ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಆ ವ್ಯಕ್ತಿಯ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿ ನನ್ನ ಜೀವನದ ನಿಜವಾದ ಹೀರೋ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಒಂದು ರಾತ್ರಿ ನಾನು ನನ್ನ ಕಾರನ್ನು ಪಾರ್ಕ್ ಮಾಡಿ ಚಿತ್ರ ನೋಡಲು ಥಿಯೇಟರ್ ಗೆ ಹೋಗಿದ್ದೆ. ನಾನು ಹಿಂತಿರುಗಿ ಬಂದಾಗ ತುಂಬ ಕತ್ತಲಾಗಿತ್ತು. ಅಲ್ಲದೆ ಆ ವ್ಯಕ್ತಿ ನನ್ನ ಕಾರಿನ ಬಳಿ ನನಗಾಗಿ ಕಾಯುತ್ತಿದ್ದರು. ನಾನು ಪಾರ್ಕಿಂಗ್ ಶುಲ್ಕ ಕಟ್ಟಿದ್ದೇನೆ ಆದರೂ ಇವರು ಯಾಕೆ ಇಲ್ಲಿ ನಿಂತಿದ್ದಾರೆ ಎಂದು ಯೋಚಿಸುತ್ತಿದ್ದೆ. ಬಳಿಕ ನಾನು ನನ್ನ ಕಾರಿನ ಕಿಟಕಿಯನ್ನು ಅರ್ಧ ತೆರೆದಿರುವುದನ್ನು ಗಮನಿಸಿದೆ. ನಾನು ಕಾರಿನ ಕಿಟಕಿ ಅರ್ಧ ತೆರೆದಿದ್ದಾಗ ಕೆಲವರು ಆ ಸಮಯವನ್ನು ಯಾರೂ ಲಾಭ ಪಡೆಯಬಾರದು ಎಂದು ಈ ವ್ಯಕ್ತಿ ನನಗಾಗಿ ನನ್ನ ಕಾರಿನ ಬಳಿ ಸುಮಾರು 3-4 ಗಂಟೆಯವರೆಗೂ ಕಾಯುತ್ತಿದ್ದರು. ನಾನು ಅವರ ಕೆಲಸಕ್ಕೆ ದುಡ್ಡು ಕೊಡಲು ಮುಂದಾದೆ. ಆದರೆ ಅವರು ಹಣವನ್ನು ನಿರಾಕರಿಸಿದ್ದರು. ಅವರ ಮಾನವೀಯತೆ, ಗೌರವ, ವಿನಯತೆಗೆ ನಾನು ಮರಳಾದೆ. ನಾನು ಎಂದೆಂದಿಗೂ ಅವರಿಗೆ ಚಿರಋಣಿ ಎನ್ನುತ್ತಾರೆ ಮೇಘನಾ. ಪರಿಚಯವಿಲ್ಲದ ಆ ವ್ಯಕ್ತಿ ನನ್ನ ರಕ್ಷಣೆಗೆ ಬಂದ ನನ್ನ ಅಣ್ಣನಂತೆ ಕಂಡ. ನಾನು ಈಗಲೂ ಅದೇ ಸ್ಥಳಕ್ಕೆ ಹೋಗುತ್ತೇನೆ. ಕಾರನ್ನು ಅಲ್ಲಿಯೇ ಪಾರ್ಕ್ ಮಾಡುತ್ತೇನೆ. ಒಂದ್ ಸಲ ಕಾರಿನ ಕಿಟಕಿ ಕ್ಲೋಸ್ ಆಗಿದೆಯೇನೋ ಅಂತಾ ಚೆಕ್ ಮಾಡ್ತೀನಿ ಇದಕ್ಕೆ ಸ್ಪೂರ್ತಿ ಬೇರೆ ಯಾರು ಅಲ್ಲಾ, ಅದೇ ವ್ಯಕ್ತಿ. ಇದನ್ನು ಕೇಳಿದವರಿಗೂ ಇದೊಂದು ಸಣ್ಣ ವಿಷಯ ಎನಿಸುತ್ತದೆ ಆದರೆ ನನಗಿದು ಜನ್ಮ ಪೂರ್ತಿ ನನೆಪಿಟ್ಟುಕೊಳ್ಳಬೇಕಾದ ದೊಡ್ಡ ವಿಚಾರ. ರಕ್ತ ಸಂಬಂಧಿಯಾಗದಿದ್ದರೂ, ಸ್ನೇಹ –ಪರಿಚಯವಿಲ್ಲದಿದ್ದರೂ ಇದ್ದಕ್ಕಿದ್ದ ಹಾಗೇ ಪರಿಚಯವಾದ ಅವರು ನನ್ನ ಅಣ್ಣನಿಗೆ ಸಮಾನ. ನಾನೆಂದಿಗೂ ಅವರನ್ನು ಮರೆಯುವುದಿಲ್ಲ.
ಈಗಲು ಅವರ ಜೊತೆ ಕಾಲ ಕಳೆಯುತ್ತೇನೆ. ಕಾರ್ ಪಾರ್ಕ್ ಮಾಡಿ ಟೀ ಕುಡಿಯಲು ಹೋಗುತ್ತೇನೆ. ಹಾಗೇ ಸಮಯ ಕಳೆಯುವಾಗ ಕಳೆದ ವಾರ ಆ ವ್ಯಕ್ತಿ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಕೇಳಿದೆ. ಆಗ ಅವರು ಸರಿ ಎಂದು ಹೇಳಿದರು. ನಾನು ಮೊದಲ ಬಾರಿಗೆ ಒಬ್ಬ ವ್ಯಕ್ತಿ ಜೊತೆ ಫೋಟೋ ಕೇಳಿದರೆ ಅದು ಇವರ ಜೊತೆಗೆ ಎಂದು ಮೇಘನಾ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
Comments