ಮಗಳ ಪೋಟೋನೋ ಟ್ರೋಲ್ ಮಾಡಿದವರ ವಿರುದ್ಧ ಕಿಡಿಕಾರಿದ ಸ್ಟಾರ್ ನಟ..!!

ಬಾಲಿವುಡ್ ಸ್ಟಾರ್ ನಟ ನಟಿಯರು ಮಾತ್ರವಲ್ಲದೆ ಅವರ ಮಕ್ಕಳು ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಿ ಬಿಡುತ್ತಾರೆ. ಬಾಲಿವುಡ್ ಸ್ಟಾರ್ಸ್ ಗಳನ್ನು ಅಭಿಮಾನಿಗಳು ಅಭಿಮಾನದ ಅಲೆಯಲ್ಲಿಯೇ ಮುಳುಗಿಸಿ ಬಿಡುತ್ತಾರೆ. ಆದರೆ ಕೆಲವೊಮ್ಮೆ ಅವರೇ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಬಾಲಿವುಡ್ ಸ್ಟಾರ್ಸ್ ಮಕ್ಕಳು ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿ ಬಿಡುತ್ತಾರೆ. ನಟ ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಯ ಪುತ್ರಿ ನ್ಯಾಸಾ ವಿಚಾರದಲ್ಲೂ ಆಗಿದ್ದು ಕೂಡ ಇದೆ.
ಕೆಲ ತಿಂಗಳ ಹಿಂದೆ ನ್ಯಾಸಾ, ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದ ಫೋಟೋವೊಂದು ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಅದರಲ್ಲಿ ನ್ಯಾಸಾ ಲಾಂಗ್ ಟೀ ಶರ್ಟ್ ತೊಟ್ಟಿದ್ದರು. ಇದನ್ನ ಟ್ರೋಲ್ ಮಾಡಿ, ನ್ಯಾಸಾ ಪ್ಯಾಂಟ್ ಧರಿಸಲು ಮರೆತಿದ್ದಾಳೆ ಅಂತಾ ಟ್ರೋಲಿಗರು ವ್ಯಂಗ್ಯ ಮಾಡಿದ್ದರು. ಕೊನೆಗೂ ನಟ ಅಜಯ್ ದೇವಗನ್ ಈ ಬಗ್ಗೆ ಈಗ ಮೌನ ಮುರಿದಿದ್ದಾರೆ. ನ್ಯಾಸಾ ಇನ್ನೂ 14 ವರ್ಷ ವಯಸ್ಸಿನವಳು ಎಂಬುದನ್ನ ಮರೆತು ಜನ ಅಸಭ್ಯವಾಗಿ ಮಾತಾಡುತ್ತಾರೆ. ಆ ಫೋಟೋದಲ್ಲಿ ಆಕೆ ಉದ್ದನೆಯ ಟೀ ಶರ್ಟ್ ಹಾಕಿದ್ದಳು.
ಶರ್ಟ್ ಉದ್ದವಾಗಿದ್ದರಿಂದ ಆಕೆ ಧರಿಸಿದ್ದ ಶಾರ್ಟ್ಸ್ ಕಾಣಿಸಲಿಲ್ಲ. ಆದ್ರೆ ಇದನ್ನೇ ಅಪಾರ್ಥ ಮಾಡಿಕೊಂಡು ನನ್ನ ಮಗಳನ್ನು ಟ್ರೋಲ್ ಮಾಡ್ತಿದ್ದಾರೆ. ಮಕ್ಕಳಿಗೆ ಅವರದ್ದೇ ಆದ ಸ್ಪೇಸ್ ನೀಡಬೇಕು. ತಂದೆ ತಾಯಿ ಫೇಮಸ್ ಆಗಿರುವುದು ಮಕ್ಕಳ ಮೇಲೆ ಎಫೆಕ್ಟ್ ಆಗಬಾರದು ಅಂತಾ ಟ್ರೋಲಿಗರ ವಿರುದ್ಧ ಅಜಯ್ ದೇವಗನ್ ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ ಟ್ರೋಲಿಗರ ಬಾಯಿಗೆ ಯಾವುದೇ ಸಣ್ಣ ವಿಚಾರ ಸಿಕ್ಕರೂ ಸಾಕು ಅದನ್ನೆ ದೊಡ್ಡದು ಮಾಡಿ ಬಿಡುತ್ತಾರೆ. ಮಕ್ಕಳ ಮೇಲೆ ಯಾವುದೇ ರೀತಿಯ ಎಫೆಕ್ಟ್ ಆಗಬಾರದು ಎನ್ನುವ ರೀತಿಯಲ್ಲಿ ಪೋಷಕರು ಅವರ ಬಗ್ಗೆ ಎಷ್ಟೆ ಗಮನ ಕೊಟ್ಟರೂ ಕೂಡ ಟ್ರೋಲಿಗರು ಮಾತ್ರ ಸುಮ್ಮನೆ ಇರುವುದಿಲ್ಲ..
Comments