ಸ್ಟೈಲಿಶ್ ಸ್ಟಾರ್ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿರುವ ಸ್ಯಾಂಡಲ್ ವುಡ್’ನ ಸ್ಟಾರ್ ನಟಿ
ಸದ್ಯ ಸಿನಿಮಾ ರಂಗದಲ್ಲೆ ಹೆಚ್ಚು ಬೇಡಿಕೆ ಇರುವ ನಟಿ ಎಂದರೆ ಅದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ… ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿ ಬಣ್ಣದ ಜಗತ್ತಿಗೆ ಕಾಲಿಟ್ಟ ರಶ್ಮಿಕಾ ಮತ್ತೆ ಹಿಂದೆ ನೋಡಲೇ ಇಲ್ಲ.. ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್... ಕೇವಲ ಕನ್ನಡವಷ್ಟೆ ಅಲ್ಲ… ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಳು ನಮ್ಮ ಸ್ಯಾಂಡಲ್ ವುಡ್ ಬೆಡಗಿ…
ಇದೀಗ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಮಿಂಚು ಹರಿಸಿ ಸದ್ಯ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಬಕ್ಕಿಯಾ ರಾಜ್ ಕಣ್ಣನ್ ನಿರ್ದೇಶನದ, ಸದ್ಯಕ್ಕೆ ‘#Kathi19’ ಅಂತಾ ಹೆಸರಿಟ್ಟಿರೋ ಸಿನಿಮಾದಲ್ಲಿ ರಶ್ಮಿಕಾ ಕಾರ್ತಿಗೆ ನಾಯಕಿಯಾಗಿ ಜೊತೆಯಾಗಿದ್ದು ಸಿನಿಮಾದ ಮುಹೂರ್ತ ನೆರವೇರಿತ್ತು. ಇದೀಗ ಈ ಬೆಡಗಿಗೆ ಎಷ್ಟು ಡಿಮ್ಯಾಂಡ್ ಬಂದಿದೆಯಂದ್ರೆ ತಮಿಳಿನ ಮತ್ತೊಂದು ಸಿನಿಮಾಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಕ್ಸಸ್‌ಫುಲ್ ನಿರ್ದೇಶಕ ಎಂದೇ ಹೆಸರುವಾಸಿ ಯಾಗಿರುವ ಸುಕುಮಾರ್ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಶನ್‌ನಲ್ಲಿ ಬರ್ತಿರೋ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಘೋಷಣೆ ಮಾಡಿದೆ. ಟ್ವಿಟರ್ ಮೂಲಕ ರಶ್ಮಿಕಾ ಈ ವಿಷಯ ಹಂಚಿಕೊಂಡಿದ್ದು ಸಖತ್ excite ಆಗಿರೋದಾಗಿ ಹೇಳಿಕೊಂಡಿದ್ದಾರೆ. ಸದ್ಯ ಚಿತ್ರಕ್ಕೆ #AA20 ಅಂತ ಹೆಸರಿಡಲಾಗಿದೆ. ಇವತ್ತು ಅಲ್ಲು ಅರ್ಜುನ್ ಹುಟ್ಟುಹಬ್ಬದ ಖುಷಿಯಲ್ಲಿ ಅಲ್ಲು ಅರ್ಜುನ್ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರದ ವಿವರಗಳನ್ನ ತಿಳಿಸಿದೆ ಚಿತ್ರತಂಡ. ಒಟ್ಟಾರೆ ಸಾನ್ವಿ ಎಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ… ಒಂದಿಷ್ಟು ವಿಷಯಗಳಿಗೆ ರಶ್ಮಿಕಾ ಟ್ರೋಲ್ ಆಗಿದ್ದಂತೂ ನಿಜ.. ಆದರೆ ಯಾರು ಏನು ಅಂದರೂ ತಲೆ ಕೆಲಡಿಸಿಕೊಳ್ಳದ ರಶ್ಮಿಕಾ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.
Comments