‘ನಿಖಿಲ್ ಎಲ್ಲಿದ್ದೀಯಪ್ಪ’ ಚಿತ್ರದ ಟೈಟಲ್‍ಗೆ ಭಾರೀ ಡಿಮ್ಯಾಂಡ್…!!

ಇತ್ತಿಚಿಗೆ ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಶಬ್ಧ ಎಂದರೆ ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಶಬ್ಧ.. ಸಾಮಾಜಿಕ ಜಾಲಾತಾಣಗಳಲ್ಲಿ ಈ ಪದ ಹೆಚ್ಚಾಗಿ ವೈರಲ್ ಆಗುತ್ತಿದೆ.. ಸಿಎಂ ಕುಮಾರಸ್ವಾಮಿ ಹೇಳಿದ ಆ ಒಂದು ಪದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದಷೆ.. ಅಷ್ಟೆ ಅಲ್ಲದೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್‍ಗೆ ಈಗ ಫುಲ್ ಡಿಮ್ಯಾಂಡ್ ಆಗಿದೆ. ನಿಖಿಲ್ ಎಲ್ಲಿದ್ದೀಯಪ್ಪ ಸಿನಿಮಾ ಟೈಟಲ್‍ಗೆ ಈಗ ಭರ್ಜರಿ ಬೇಡಿಕೆ ಪ್ರಾರಂಭವಾಗಿದೆ.
ನಿಖಿಲ್ ಎಲ್ಲಿದ್ದೀಯಪ್ಪ ಶೀರ್ಷಿಕೆಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಮಂಡ್ಯದ ಚುನಾವಣಾ ಕಣವೇ ಸಿನಿಮಾ ಕಥೆಯಾಗಿದ್ದು, “ಮಂಡ್ಯದ ಹೆಣ್ಣು”, “ಜೋಡೆತ್ತು”, “ಕಳ್ಳೆತ್ತು” ಟೈಟಲ್ ನೋಂದಣಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿ ಬಿಟ್ಟಿದೆ. ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದಾರೆ. ಒಟ್ಟು 7 ರಿಂದ 8 ಚಿತ್ರತಂಡಗಳು ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದೆ. ಆದರೆ ಇದೆಲ್ಲ ರಾಜಕೀಯಕ್ಕೆ ಸಂಬಂಧಿಸುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ನೀಡಲು ನಿರಾಕರಿಸಿದೆಯಂತೆ. ಒಟ್ಟಾರೆಯಾಗಿ ಯಾವುದು ಟ್ರೆಂಡ್'ನಲ್ಲಿ ಇರುತ್ತದೆಯೋ ಅಂತ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ ನಮ್ಮ ನಿರ್ದೇಶಕರು ಎತ್ತಿದ ಕೈ... ಮುಂದೆ ಈ ಸಿನಿಮಾ ತೆರೆ ಮೇಲೆ ಬಂದರೂ ಬರಬಹುದು.
Comments