ಸುದೀಪ್ ನಾಯಕಿಯ ಬೇಬಿ ಬಂಪ್ ಪೋಟೋ ವೈರಲ್..!!
ತಾಯಿ ಆಗೋದೆ ಒಂಥರಾ ಸಿಹಿಯ ಅನುಭವ.. ತಾಯಿ ಆದರೇನೋ ಹೆಣ್ಣಿನ ಲೈಫ್ ಫುಲ್ ಫೀಲ್ ಆಗೋದು.. ಆದರೆ ಮೊದಲು ಸಿನಿಮಾ ನಾಯಕಿಕರು ಮಕ್ಕಳಾದರೆ ನಮ್ಮ ಗ್ಲಾಮರ್ ಹಾಳಾಗುತ್ತೆ ಅಂತ ಯೋಚನೆ ಮಾಡಿಕೊಂಡು ಸುಮ್ಮನಾಗಿ ಬಿಡುತ್ತಾರೆ.. ಆದರೆ ಅದ್ಯಾಕೋ ಗೊತ್ತಿಲ್ಲ…ಇತ್ತಿಚಿನ ಸ್ಟಾರ್ ನಾಯಕಿರೆಲ್ಲಾ ಅದನ್ನೆಲ್ಲಾ ಮರೆತು ಗಂಡ ಮನೆ ಮಕ್ಕಳು ಅಂತಾ ಖುಷಿಯಾಗಿದ್ದಾರೆ.. ಇದೀಗ ಸುದೀಪ್ ಅಭಿನಯದ ವರದನಾಯಕ ಸಿನಿಮಾದಲ್ಲಿ ಸ್ಕ್ರೀನ್ ಷೇರ್ ಮಾಡಿದ್ದ ಸಮೀರಾ ರೆಡ್ಡಿ ಇದೀಗ ಎರಡನೇ ಮಗುವಿನ ಬೇಬಿ ಬಂಪ್ ಪೋಟೋ ವೈರಲ್ ಮಾಡಿದ್ದಾರೆ.
ವರದನಾಯಕ ಸಿನಿಮಾದ ನಾಯಕಿ ಸಮೀರಾ ರೆಡ್ಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರ ತಮ್ಮ ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಮೂರು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿರುವ ಸಮೀರಾ, ಮಗು ಕಿಕ್ ಮಾಡುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಕಂದನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇದೂವರೆಗೂ ಫೋಟೋಗೆ 13 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಿ, ಸುಂದರವಾದ ಫೋಟೋ, ಗಂಡು ಮಗು ಆಗಲಿದೆ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೆ ಅಲ್ಲದೆ ಕೆಲವರ ಕಾಮೆಂಟ್ ಗೆ ಸಮೀರಾ ತಿರುಗೇಟು ಕೊಟ್ಟಿದ್ದಾರೆ. ನೀವು ನಿಮ್ಮನ ಹೊಟ್ಟೆಯಲ್ಲಿ ಇದ್ದಾರಲೂ ಅವರು ಕೂಡ ಸೆಕ್ಸಿಯಾಗಿ ಕಾಣುತ್ತಿದ್ದರ ಅಂತ ಹೋಗಿ ನಿಮ್ಮ ತಾಯಿಯನ್ನು ಕೇಳಿ ಎಂದು ಹೇಳಿದ್ದಾರೆ.. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಮೀರಾ ಫುಲ್ ಖುಷಿಯಲ್ಲಿದ್ದಾರೆ
Comments