ಪುತ್ರಿಯ ಸಿನಿಮಾದಲ್ಲಿ ಮೂಗು ತೂರಿಸಿದ್ದಕ್ಕೆ ಬಾಲಿವುಡ್ ನಟನಿಗೆ ಬಂತು ನೋಟಿಸ್..!!

ಬಾಲಿವುಡ್ ಸ್ಟಾರ್ ನಟ ನಟಿಯರು ಇತ್ತಿಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.. ಕೆಲವು ನಟ ನಟಿಯರು ಟ್ರೋಲಿಗರ ಬಾಯಿಗೆ ಆಹಾರವಾಗಿ ಬಿಡುತ್ತಾರೆ…ಸ್ಟಾರ್ ನಟ ನಟಿಯರು ಅಷ್ಟೆ ಅಲ್ಲದೇ ಅವರ ಮಕ್ಕಳು ಕೂಡ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ…ಶಾರುಕ್ ಖಾನ್ ಮಗಳು, ಸೈಫ್ ಅಲಿ ಖಾನ್ ಮಗಳು ಸೇರಿದಂತೆ ಸಾಕಷ್ಟು ನಟ ನಟಿಯರ ಮಕ್ಕಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ…ಇದೀಗ ಸುನೀಲ್ ಶೆಟ್ಟಿ ಮಗಳು ಕೂಡ ಸುದ್ದಿಯಾಗಿದ್ದಾರೆ. ಅರೇ ಹೌದಾ ಯಾಕೆ ಅಂತಾ ಯೋಚನೆ ಮಾಡುತ್ತಿದ್ದೀರಾ..? ಮುಂದೆ ಓದಿ..
ಪುತ್ರಿ ಆತಿಥ್ಯ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾದ ನಿರ್ಮಾಣ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿರುದ್ಧ ನಿರ್ಮಾಪಕರು ಸಿಡಿಮಿಡಿಗೊಂಡಿದ್ದಾರೆ. ಪುತ್ರಿ ಆತಿಥ್ಯ ಅಭಿನಯಿಸುತ್ತಿರುವ 'ಮೋಟಿ ಚೋರ್ ಚಕ್ನಾಚೋರ್' ಸಿನಿಮಾದಲ್ಲಿ ಅನವಶ್ಯಕವಾಗಿ ತಲೆ ಹಾಕಿದ್ದಕ್ಕೆ ಸುನಿಲ್ ಶೆಟ್ಟಿಗೆ ಲೀಗಲ್ ನೋಟಿಸ್ ನೀಡಿರುವವ ನಿರ್ಮಾಪಕರಾದ ರಾಜೇಶ್ ಮತ್ತು ಕಿರಣ್ ಭಾಟಿಯಾ ನಮ್ಮ ಸಿನಿಮಾ ವಿಚಾರದಲ್ಲಿ ನಮ್ಮದೇ ಅಂತಿಮ ತೀರ್ಮಾನ ಎಂದು ಫರ್ಮಾನು ಹೊರಡಿಸಿದ್ದಾರೆ. ಮಗಳ ಸಿನಿಮಾದ ವಿಷಯಕ್ಕೆ ಮೂಗು ತೋರಿಸಿದಕ್ಕೆ ತಂದೆಗೆ ಸಂಕಷ್ಟ ಬಂದಂತೆ ಆಗಿದೆ.
Comments